ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಆಗಸ್ಟ್ 15 ರಂದು ಧ್ವಜಾರೋಹಣಕ್ಕೆ ಅಭ್ಯಾಗತರಾಗಿ ಆಗಮಿಸಿ ಶ್ರೀಯುತ ವಿಜಯಕುಮಾರ್ ಇವರು ಶುಭ ಹಾರೈಸಿದರು.
ನಿವೃತ್ತ ಸೇನಾನಿ ಎನ್ ಆರ್ ವಿಜಯಕುಮಾರ್ ಅವರು ಮಾತನಾಡಿ, ದೇಶ ರಕ್ಷಣೆ ಅನ್ನುವುದು ಸೈನ್ಯದಲ್ಲಿದ್ದವರು ಮಾತ್ರ ಮಾಡಬೇಕಾದ ಕೆಲಸ ಎಂದೇನಿಲ್ಲ, ಅದಕ್ಕೆ ವಯಸ್ಸು- ಅಂತಸ್ತಿನ ಅಂತರವಿಲ್ಲ ಪ್ರತಿಯೊಬ್ಬ ಪ್ರಜೆಯೂ ತಮ್ಮ ದೈನಂದಿನ ಕಾರ್ಯ ವಿಧಾನಗಳಲ್ಲೇ ಸ್ವ- ಪ್ರಜ್ಞೆಯೊಂದಿಗೆ ದೇಶರಕ್ಷಣೆಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದರು.
ಅಮೃತ ಮಹೋತ್ಸವ ಪ್ರಯುಕ್ತ ನಡೆದ ಸ್ಪರ್ಧಾ ವಿಜೇತರಿಗೆ ವಿದ್ವಾನ್ ಗಿರೀಶ್ ಕುಮಾರ್ ಬಹುಮಾನ ವಿತರಿಸಿ ರಚನಾತ್ಮಕ ಸ್ಪರ್ಧಾ ಮನೋಭಾವ ಮಕ್ಕಳ ವ್ಯಕ್ತಿತ್ವ ಬೆಳವಣಿಗೆಗೆ ಸಹಕಾರಿ ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ,ಶಿಕ್ಷಕ ರಕ್ಷಕ ಸಂಘದ ಪದಾಧಿಕಾರಿಗಳು, ಪೋಷಕ ವೃಂದದವರು ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ವೃಂದದವರ ಸಂಯೋಜನೆಯಲ್ಲಿ ರೂಪುಗೊಂಡ ಕಾರ್ಯಕ್ರಮದಲ್ಲಿ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದರು