ಅಟಲ್ ಪ್ರಯೋಗಾಲಯ ನಿರ್ವಹಣಾ ಕಾರ್ಯಾಗಾರ ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಮಂಗಳೂರು ಮತ್ತು ಶ್ರೀ ರಾಮಕೃಷ್ಣ ಪ್ರೌಢಶಾಲೆ ಪುತ್ತೂರು- ಇವರ ಸಹಯೋಗದಲ್ಲಿ ಶ್ರೀ ರಾಮಕೃಷ್ಣ ಪ್ರೌಢಶಾಲೆಯಲ್ಲಿ ನಡೆದ ಅಟಲ್ ಟಿಂಕರಿಂಗ್ ನೋಡಲ್ ಶಿಕ್ಷಕರ ಕಾರ್ಯಾಗಾರದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಸೃಜನ-ಅಟಲ್ ಟಿಂಕರಿಂಗ್ ಪ್ರಯೋಗಾಲಯದ ನೋಡಲ್ ಶಿಕ್ಷಕರಾದ ಪುಷ್ಪಾವತಿ ಹಾಗೂ ಕೀರ್ತನ್ ಭಾಗವಹಿಸಿದರು. ಈ ಸಂದರ್ಭ ಟಿಂಕರಿಂಗ್ ಪ್ರಯೋಗಾಲಯದ ನಿರ್ವಹಣೆ, ತಾಂತ್ರಿಕ ಪರಿಚಯ, PFMS(Public Financial Management System)ನ ಕುರಿತು ಮಾಹಿತಿಯನ್ನು ನೀಡಲಾಗಿತ್ತು.


