ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ 2022-23 ರ ಶೈಕ್ಷಣಿಕ ವರ್ಷಕ್ಕೆ ಶಾಲಾ ಮಂತ್ರಿಮಂಡಲದ ರಚನೆ ಮತ್ತು ಆಯ್ಕೆಯಾದ ಮಂತ್ರಿಗಳಿಗೆ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮ ನಡೆಯಿತು. ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಆಶಾ ಬೆಳ್ಳಾರೆ ಮತ್ತು ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ಶ್ರೀಮತಿ ನಳಿನಿ ವಾಗ್ಲೆ ಪ್ರತಿಜ್ಞೆಯನ್ನು ಬೋಧಿಸಿದರು.



ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿ ನಾಯಕಿಯಾಗಿ ಧಾತ್ರಿ ಆರ್ ರೈ, ಉಪನಾಯಕಿಯಾಗಿ ಅವನಿ ಬೆಳ್ಳಾರೆ ಹಾಗೂ ಪ್ರಾಥಮಿಕ ವಿಭಾಗದ ನಾಯಕನಾಗಿ ದವನ್ ಡಿ ಎ, ಉಪನಾಯಕನಾಗಿ ಧನುಷ್ ಡಿ ಜಿ ಆಯ್ಕೆಯಾಗಿ ಪ್ರಮಾಣವಚನವನ್ನು ಸ್ವೀಕರಿಸಿದರು. ಪ್ರತಿ ಪಕ್ಷದ ನಾಯಕ ವರದರಾಜ್ ಎಚ್ ಶೆಣೈ,ಪ್ರತಿ ಪ್ರಕ್ಷದ ನಾಯಕಿ ಸಹನಾ, ಸ್ಪೀಕರ್ ಶ್ರೀಶ, ಸಾಂಸ್ಕೃತಿಕ ಮಂತ್ರಿಯಾಗಿ ಅಗಮ್ಯ, ವಿದ್ಯಾಮಂತ್ರಿ ತನ್ಮಯಕೃಷ್ಣ, ನೀರಾವರಿ ಮಂತ್ರಿ ಧನ್ವಿತ್, ಗೃಹ ಮಂತ್ರಿ ಸಂಜನ್ ಜಗದೀಶ, ಕ್ರೀಡಾ ಮಂತ್ರಿ ಚೈತ್ರೇಶ್, ಆರೋಗ್ಯ ಮಂತ್ರಿ ಅಭೀಕ್ಷಾ ಜಿ, ನೈರ್ಮಲ್ಯ ಮಂತ್ರಿ ಶ್ರಾವ್ಯ ಎನ್ ವಿ, ಕಾನೂನು ಮಂತ್ರಿ ಧನ್ಯಾ, ಸಾರಿಗೆ ಮಂತ್ರಿ ಹೃಷಿಕೇಶ್, ವಾರ್ತಾಮಂತ್ರಿ ಯತೀಕ್ಷಾ, ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಿ ಚಿನ್ಮಯ ಮಜಿ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು. ಕಾರ್ಯದರ್ಶಿಯಾಗಿ ಅಮೃತ ಕಾವೇರಿ ಆಯ್ಕೆಯಾದರು.
ಶಾಲಾ ’ಸಮನ್ವಯ’-ಸಮಾಜ ವಿಜ್ಞಾನ ಸಂಘದಿಂದ ಪ್ರತಿಜ್ಞಾ ವಿಧಿ ಹಾಗೂ ಜವಾಬ್ದಾರಿ ಸ್ವೀಕಾರ ಕಾರ್ಯಕ್ರಮ ನಡೆದಿದ್ದು, ಸಂಘದ ಶಿಕ್ಷಕ ಸಂಯೋಜಕರಾದ ಶಾಲಾ ಹಿರಿಯ ಶಿಕ್ಷಕಿ ಲೀಲಾವತಿ, ಶಿಕ್ಷಕ ರಾಮ ನಾಯ್ಕ್ ಎಂ, ಚಂದ್ರಶೇಖರ್, ಶಿಕ್ಷಕಿ ಗೀತಾ ಸಹಕರಿಸಿದರು.