5 ರಿಂದ 7 ನೇ ತರಗತಿಯವರೆಗಿನ ಪೋಷಕರ ಸಭೆ

ಮಗುವಿನ ಕಲಿಕೆಯಲ್ಲಿ ಸಣ್ಣ-ಪುಟ್ಟ ವಿಷಯಗಳ ಕಡೆಗೆ ನಾವು ನೀಡುವ ಗಮನವು ಮಹತ್ತರ ಪಾತ್ರ ವಹಿಸುತ್ತದೆ -ಡಾ|ಶೋಭಿತಾ ಸತೀಶ್, ಪ್ರಾಂಶುಪಾಲರು ವಿವೇಕಾನಂದ ಶಿಕ್ಷಣ ಮಹಾವಿದ್ಯಾಲಯ ಪುತ್ತೂರು.

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ’ಸಾನಿಧ್ಯ’ ಕಲಿಕಾ ಹಾದಿಯ ಪೋಷಕತ್ವ ವೇದಿಕೆಯಿಂದ ೫ನೇ ತರಗತಿಯಿಂದ ೭ನೇ ತರಗತಿಯವರೆಗಿನ ಪೋಷಕರ ಸಭೆ ನಡೆದಿದ್ದು ಶ್ರೀಯುತರು ಅಭ್ಯಾಗತರಾಗಿ ಆಗಮಿಸಿ ಮಾತನಾಡಿ ಮಗುವಿನ ಸಮಗ್ರ ಬೆಳವಣಿಗೆಯಲ್ಲಿ ಪಠ್ಯ ಹಾಗೂ ಸಹಪಠ್ಯ ಚಟುವಟಿಕೆಗಳು ಸಮಾನ ಮಹತ್ವವನ್ನು ಹೊಂದಿದ್ದು ಬದುಕಿನ ಸರ್ವಾಂಗೀಣ ವಿಕಾಸಕ್ಕೆ ಪೂರಕವಾಗಿರುವ ಬಗ್ಗೆ ತಿಳಿಸಿದರು.

ದೀಪ ಪ್ರಜ್ವಲನೆ,ಪುಷ್ಪಾರ್ಚನೆಯೊಂದಿಗೆ ಆರಂಭವಾದ ಸಭೆಯಲ್ಲಿ ಶಾಲಾ ವಾರ್ಷಿಕ ಗೀತೆಯನ್ನು ಪೋಷಕರಿಗೆ ಹೇಳಿಕೊಡಲಾಯಿತು. ಸರಸ್ವತಿ ವಂದನೆಯೊಂದಿಗೆ ಶುಭಾರಂಭವಾಗುವ ಶಾಲಾ ಪ್ರಾರ್ಥನೆಯ ಮಹತ್ವವನ್ನು ತಿಳಿಸಿದ ಶಿಕ್ಷಕ ವೃಂದ ಶಾಲಾ ಪ್ರಾರ್ಥನೆಯನ್ನು ಹಾಡಿದರು.ಪೋಷಕರಿಗೆ ಶಾಲಾ ವಾರ್ಷಿಕ ಯೋಜನೆಯನ್ನು ತಿಳಿಸಿದ ಅನಂತರ ಶಿಕ್ಷಕರ ಹಾಗೂ ಪೋಷಕರ ನಡುವೆ ಪಠ್ಯ ಹಾಗೂ ಪಠ್ಯಪೂರಕ ವಿಷಯಗಳ ಬಗ್ಗೆ ಸಂವಾದ ನಡೆಯಿತು. ಪ್ರಸಕ್ತ ಶೈಕ್ಷಣಿಕ ವರ್ಷದ ಶಿಕ್ಷಕ-ರಕ್ಷಕ ಸಂಘಕ್ಕೆ ತರಗತಿಯ ಪ್ರತಿ ವಿಭಾಗಗಳಿಂದ ಇಬ್ಬರು ಪೋಷಕ ಪ್ರತಿನಿಧಿಗಳು ಆಯ್ಕೆಯಾದರು.

ಸಭಾಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಖಜಾಂಜಿಯವರಾದ ಶ್ರೀ ಅಶೋಕ ಕುಂಬ್ಳೆ ಇವರು ಶಾಲಾ ಪ್ರಗತಿಯಲ್ಲಿ ಸದಾ ಸಕ್ರಿಯರಾಗಿರುವ ಪೋಷಕರ ಸಹಕಾರಕ್ಕಾಗಿ ಅಭಿವಂದನೆ ಸಲ್ಲಿಸಿದರು.

ವಿಶ್ವಯೋಗ ದಿನಾಚರಣೆಯ ಅಂಗವಾಗಿ ಸ್ವಾಸ್ಥ್ಯ ಚಟುವಟಿಕಾ ಸಂಘದಿಂದ ಹಮ್ಮಿಕೊಳ್ಳಲಾದ ’ಸ್ವಸ್ಥ-ಸ್ವಾಸ್ಥ್ಯ’ ಕಾರ್ಯಕ್ರಮದಡಿಯಲ್ಲಿ ಪೋಷಕರಿಗೆ ಸರಳ ವ್ಯಾಯಾಮ ಹಾಗೂ ಪ್ರಾಣಾಯಾಮ ಪ್ರಾತ್ಯಕ್ಷಿಯನ್ನು ನಡೆಸಲಾಯಿತು.

ಸ್ವಾಗತ ಪ್ರಾಸ್ತಾವಿಕದೊಂದಿಗೆ ಮುಂದುವರಿದ ಪೋಷಕರ ಸಭೆ ಧನ್ಯವಾದ,ಶಾಂತಿ ಮಂತ್ರದೊಂದಿಗೆ ಸಂಪನ್ನಗೊಂಡಿತು.

Highslide for Wordpress Plugin