ಶಾಲಾ ಚುನಾವಣೆ 2022-23

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಇಲ್ಲಿ ದಿನಾಂಕ 4-6-2022 ನೇ ಶನಿವಾರದಂದು 2022-23 ನೇ ಶೈಕ್ಷಣಿಕ ಸಾಲಿನ ಚುನಾವಣೆಯು ನಡೆಯಿತು.ಚುನಾವಣೆಯನ್ನು ಸಾರ್ವತ್ರಿಕ ಚುನಾವಣೆಯ ರೀತಿಯಲ್ಲೇ ನಡೆಸಲಾಯಿತು. ಕೈ ಗುರುತು, ಬ್ಯಾಲೆಟ್ ಪೇಪರ್‌ಗಳನ್ನು ಬಳಸಲಾಯಿತು.

ಪ್ರೌಢಶಾಲಾ ವಿಭಾಗದಲ್ಲಿ ಧಾತ್ರಿ ರೈ ನಾಯಕಿಯಾಗಿ, ಅವನಿ ಬೆಳ್ಳಾರೆ ಉಪನಾಯಕಿಯಾಗಿ ಅತ್ಯಧಿಕ ಮತಗಳಿಂದ ಆಯ್ಕೆಯಾದರು. ಪ್ರಾಥಮಿಕ ಶಾಲಾ ವಿಭಾಗದಲ್ಲಿ ದವನ್ ನಾಯಕನಾಗಿ, ಧನುಷ್ ಉಪನಾಯಕನಾಗಿ ಆಯ್ಕೆಯಾದರು.

ಚುನಾವಣಾಧಿಕಾರಿಯಾಗಿ ಶಿಕ್ಷಕರಾದ ಶ್ರೀ ರಾಮನಾಯ್ಕ ಹಾಗೂ ಚಂದ್ರಶೇಖರ ಸುಳ್ಯಪದವುರವರು ಕಾರ್ಯನಿರ್ವಹಿಸಿದರು. ಎಲ್ಲಾ ಶಿಕ್ಷಕ ವೃಂದದವರು ಚುನಾವಣಾ ಪ್ರಕ್ರಿಯೆಯಲ್ಲಿ ಸಹಕರಿಸಿದರು.

Highslide for Wordpress Plugin