ಶಾಲಾ ಶೈಕ್ಷಣಿಕ ಯೋಜನಾ ಅರಿವು – ವೇದಿಕೆ ವತಿಯಿಂದ ಪ್ರಸಕ್ತ ಸಾಲಿನ 10 ನೇ ತರಗತಿಯ ಮಕ್ಕಳಿಗೆ ಮುಂದಿನ ಹಂತದ ಶೈಕ್ಷಣಿಕ ವಿಷಯ ಆಯ್ಕೆಯ ಬಗ್ಗೆ ಮಾರ್ಗದರ್ಶನ ನೀಡಲಾಯಿತು.





ವಿವೇಕಾನಂದ ಪಾಲಿಟೆಕ್ನಿಕ್ ಕಾಲೇಜು ಹಾಗೂ ವಿವೇಕಾನಂದ ಪದವಿಪೂರ್ವ ಕಾಲೇಜಿನಿಂದ ಬಂದಂತಹ ಪ್ರಾಧ್ಯಾಪಕ ವೃಂದದವರಿಂದ ಪದವಿಪೂರ್ವ ಹಾಗೂ ತಾಂತ್ರಿಕ ತರಗತಿ ಸಂಬಂಧಿ ಆಯ್ಕಾ ವಿಷಯಗಳ ಬಗ್ಗೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಿತು.
ಕಾರ್ಯಾಗಾರದಲ್ಲಿ ಮುಂದಿನ ಹಂತದ ವೃತ್ತಿಪರ ಉನ್ನತ ವಿದ್ಯಾಭ್ಯಾಸದ ಬಗ್ಗೆಯೂ ಮಾಹಿತಿ ನೀಡಲಾಯಿತು.
ಶಾಲಾ ಸಹ ಶಿಕ್ಷಕ ವೃಂದದವರೂ ಮಾಹಿತಿ ಕಾರ್ಯಾಗಾರದಲ್ಲಿ ಭಾಗವಹಿಸಿದರು.