ಶಾಲಾ 8 ನೇ ತರಗತಿಯ ವಿದ್ಯಾರ್ಥಿಯಾದ ಧನುಷ್ ಸುಮಾರು 3 ತಿಂಗಳಿಂದ ಮೆದುಳು ಜ್ವರದಿಂದ ಅಸ್ವಸ್ಥ ಸ್ಥಿತಿಯಲ್ಲಿ ಇದ್ದು ಈತನ ಚಿಕಿತ್ಸೆಯ ವೆಚ್ಚಕ್ಕಾಗಿ ಶಾಲಾ ವತಿಯಿಂದ ಪೋಷಕರಲ್ಲಿ ಆರ್ಥಿಕ ರೂಪದ ಸಹಕಾರ ಕೇಳಲಾಗಿತ್ತು. ಪೂರ್ವ ಪ್ರಾಥಮಿಕದಿಂದ ಹತ್ತನೇ ತರಗತಿಯ ಮಕ್ಕಳ ಪೋಷಕರು ತತ್ಸಬಂಧಿ ವಿಷಯಕ್ಕೆ ನೀಡಿದ ಸ್ಪಂದನ ಸಹಕಾರ ಸದಾ ಸ್ಮರಣೀಯವಾಗಿದ್ದು, ಪ್ರತಿ ತರಗತಿಯಿಂದ ಸಂಗ್ರಹವಾದ ಹಣದ ಮೊತ್ತದ ವಿವರವನ್ನು ಆಡಳಿತ ಮಂಡಳಿ, ಪೋಷಕರಿಗೆ ನೀಡಲಾಯ್ತು.


ತರಗತಿಗಳ ಸಂಗ್ರಹದ ಮೊತ್ತ, ವಿವೇಕಾನಂದ ವಿದ್ಯಾವರ್ಧಕ ಸಂಘ, ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದದವರು ನೀಡಿರುವ ಮೊತ್ತ ಒಟ್ಟು ಸೇರಿಸಿ ರೂ 1,29,375 ಸಂಗ್ರಹವಾಗಿದ್ದು, ಇಷ್ಟು ಮೊತ್ತವನ್ನು 3 ಹಂತಗಳಲ್ಲಿ ಅವರ ಪೋಷಕರಿಗೆ ನೀಡಲಾಯ್ತು. ಪೋಷಕರ ಹಾರೈಕೆ ಆಶೀರ್ವಾದ, ಧನ ರೂಪದ ಸಹಕಾರ, ಭಗವಂತನ ಅನುಗ್ರಹದಿಂದ ಧನುಷ್ನ ಆರೋಗ್ಯದಲ್ಲಿ ನಿಧಾನಗತಿಯ ಚೇತರಿಕೆ ಕಂಡುಬರುತ್ತಿರುವ ಬಗ್ಗೆ ಮುಖ್ಯ ಗುರುಗಳು ಧನ್ಯವಾದ ತಿಳಿಸಿದರು.
ಈ ಬಗ್ಗೆ ವಿದ್ಯಾರ್ಥಿಯ ಪೋಷಕರು ವಿವೇಕಾನಂದ ವಿದ್ಯಾವರ್ಧಕ ಸಂಘ, ಶಾಲಾ ಆಡಳಿತ ಮಂಡಳಿ, ಶಿಕ್ಷಕ ವೃಂದದವರಿಗೆ ಕೃತಜ್ಞತಾಪೂರ್ವಕ ನಮನ ಸಲ್ಲಿಸಿದರು.