ಪುತ್ತೂರಿನಲ್ಲಿ ಗಮಕ ಕಲಾ ಪರಿಷತ್ತಿನ ಕಾರ್ಯ ಚಟುವಟಿಕೆ ಆರಂಭ

ಕರ್ನಾಟಕ ಗಮಕ ಕಲಾ ಪರಿಷತ್ತಿನ ಪುತ್ತೂರು ತಾಲೂಕು ಘಟಕದ ಪದಗ್ರಣ ಸಮಾರಂಭವು ನಡೆಯಿತು. ಇಲ್ಲಿನ ತೆಂಕಿಲ, ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ 2021- 22 ನೆ ಸಾಲಿನ ಗಮಕ ಕಲಾ ಪರಿಷತ್ತು ಪುತ್ತೂರು ಘಟಕದ ನೂತನ ಪದಾಧಿಕಾರಿಗಳ ಜವಾಬ್ದಾರಿ ಸ್ವೀಕಾರವು ನೆರವೇರಿತು.ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾಗಿ ಭಾಸ್ಕರ ಬಾರ್ಯ.ಉಪಾಧ್ಯಕ್ಷರಾಗಿ ಈಶ್ವರ ಭಟ್ ಗುಂಡ್ಯಡ್ಕ. ಕಾರ್ಯದರ್ಶಿಯಾಗಿ ಆಶಾ ಬೆಳ್ಳಾರೆ. ಉಪ ಕಾರ್ಯದರ್ಶಿಯಾಗಿ ಅಪೂರ್ವಗುಂಡ್ಯಡ್ಕ. ಸಂಚಾಲಕರಾಗಿ ಹರಿಣಾಕ್ಷಿ ಜೆ ಶೆಟ್ಟಿ. ಕಾರ್ಯಕ್ರಮ ಸಂಯೋಜಕರಾಗಿ ಶಾಲಾ ಸಹ ಶಿಕ್ಷಕರಾದ ವೀಣಾ ಸರಸ್ವತಿ, ಚಂದ್ರಶೇಖರ್, ಜಯಂತಿ ಹೆಬ್ಬಾರ್, ವೀಣಾ ನಾಗೇಶ ತಂತ್ರಿ ಆಯ್ಕೆಗೊಂಡರು.

ಪ್ರಸ್ತುತ ಸಮಯದ ವ್ಯತ್ಯಸ್ಥ ಪರಿಸ್ಥಿತಿಗಳಿಂದಾಗಿ ಸ್ಥಗಿತ ಗೊಂಡಿರುವ ಕಾರ್ಯ ಯೋಜನೆಗಳಿಗೆ ಚಾಲನೆ ಕೊಡುವ ಬಗ್ಗೆ ಚರ್ಚೆಗಳು ನಡೆದು ಪ್ರಸಕ್ತ ಸಾಲಿನಲ್ಲಿ ಈ ಎಲ್ಲಾ ಯೋಜನೆಗಳು ಕಾರ್ಯ ರೂಪಕ್ಕೆ ತರುವ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಮುಂದಿನ ಕಾರ್ಯ ಯೋಜನೆಗೆ ಸಂಬಂಧಿಸಿ, ವಿವೇಕಾನಂದ ಕನ್ನಡ ಶಾಲಾ ಮಕ್ಕಳಿಗೆ ನಡೆಯುತ್ತಿರುವ ಗಮಕ ವಾಚನ ಮತ್ತು ವ್ಯಾಖ್ಯಾನ, ತರಗತಿಯ ಮಕ್ಕಳಿಗೆ ಮುಂದಿನ ದಿನಗಳಲ್ಲಿ ಪರೀಕ್ಷೆ ನಡೆಸುವುದು, ಶಾಲಾ ಕಾಲೇಜುಗಳಲ್ಲಿ ವಾಚನ ವ್ಯಾಖ್ಯಾನ ಪ್ರಾತ್ಯಕ್ಷಿಕೆ ನಡೆಸುವುದು, ಧಾರ್ಮಿಕ ಸಮಾರಂಭಗಳಲ್ಲಿ ಗಮಕ ಕಾರ್ಯಕ್ರಮಗಳನ್ನು ನಡೆಸುವುದು ಎಂದು ಯೋಜನೆಗಳನ್ನು ಹಮ್ಮಿಕೊಳ್ಳಲಾಯಿತು.

Highslide for Wordpress Plugin