ರಥಸಪ್ತಮಿ ಕಾರ್ಯಕ್ರಮ ಆಚರಣೆ

ರಥಸಪ್ತಮಿಯಂದು ನಮ್ಮ ಮೈಸೋಕುವ ಬಿಸಿಲಿಗೆ ವಿಶೇಷ ಶಕ್ತಿಯಿದ್ದು ಇದು ಶಾರೀರಿಕ ಸುಸ್ಥಿತಿಗೆ ಸಹಕಾರಿಯಾಗಿದೆ. ಆದ್ದರಿಂದ ಈ ದಿನದ ಸೂರ್ಯ ನಮಸ್ಕಾರಕ್ಕೆ ವಿಶೇಷ ಪ್ರಾಶಸ್ತ್ಯವಿರುತ್ತದೆ – ವಸಂತ ಸುವರ್ಣ, ಶಾಲಾ ಸಂಚಾಲಕರು

ವಿವೇಕಾನಂದ ಕನ್ನಡ ಶಾಲೆ ತೆಂಕಿಲದಲ್ಲಿ ಸೂರ್ಯ ನಮಸ್ಕಾರ ಅಭ್ಯಾಸ ಸಪ್ತಾಹದ ಉದ್ಘಾಟನೆ ಮತ್ತು ಸಮಾರೋಪ ಕಾರ್ಯಕ್ರಮ ನಡೆಯಿತು. ಶಾಲಾ ದೈಹಿಕ ಹಾಗೂ ಯೋಗಾಭ್ಯಾಸ ಶಿಕ್ಷಕರಾದ ದಾಮೋದರ್, ಹರಿಣಾಕ್ಷಿ, ರಂಗಪ್ಪ, ಗಣೇಶ್, ವೀಣಾಸರಸ್ವತಿ ಇವರ ಸಂಯೋಜನೆಯಲ್ಲಿ ದಿನಾಂಕ 31.01.2022ರಂದು ಶಾಲಾ ಏಕಲವ್ಯ ಕ್ರೀಡಾ ಪ್ರಕಲ್ಪದ ಆಯೋಜನೆಯಲ್ಲಿ ಆರಂಭಗೊಂಡು ದಿನಾಂಕ 07.02.2022 ರಂದು ಸಮಾರೋಪ ಸಂಪನ್ನಗೊಂಡಿತು. 1ನೇ ತರಗತಿಯಿಂದ 10ನೇ ತರಗತಿಯ ಮಕ್ಕಳು, ಶಿಕ್ಷಕರು ಇದರಲ್ಲಿ ನಿರತ ಭಾಗವಹಿಸಿದ್ದು ಸಮಾರೋಪವು ಶಾಲಾ ಕ್ರೀಡಾಂಗಣದಲ್ಲಿ ಸಾಮೂಹಿಕ ಸೂರ್ಯನಮಸ್ಕಾರ ಮಾಡಲಾಯಿತು.

ಈ ಸಂದರ್ಭದಲ್ಲಿ ಸೂರ್ಯನಮಸ್ಕಾರದ ಪ್ರಾಶಸ್ತ್ಯ, ಭಾರತೀಯರು ಪುರಾತನ ಕಾಲದಿಂದಲೂ ಸೂರ್ಯವನ್ನು ಪೂಜಿಸುತ್ತಾ ಬಂದಿರುವ ಬಗ್ಗೆ ಹಾಗೂ ಸೂರ್‍ಯನಿಗೆ ಸಂಬಂಧಿಸಿದ ಬೀಜ ಮಂತ್ರಗಳ ಮಹತ್ವವನ್ನು ಹೇಳಲಾಯಿತು. ಶಾಲಾ ಅಧ್ಯಕ್ಷರಾದ ರಮೇಶ್ಚಂದ್ರ ಕಾವು ಇವರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Highslide for Wordpress Plugin