ಕಿರ್ಲೋಸ್ಕರ್ ಮೋಟರ್ಸ್ ಕೈಗಾರಿಕಾ ವಲಯ ಬಿಡದಿ ವತಿಯಿಂದ ನಡೆದ Eco Zone ತರಬೇತಿ ಕಾರ್ಯಾಗಾರ ವಿವೇಕಾನಂದ ಕನ್ನಡ ಶಾಲಾ ಮಕ್ಕಳಿಗೆ ಆಯೋಜಿಸಲಾಗಿತ್ತು. ಸಹಶಿಕ್ಷಕಿ ಪುಷ್ಪಾವತಿ ಮತ್ತು ಗೌತಮಿ ಇವರ ಸಂಯೋಜನೆಯಲ್ಲಿ ಜರುಗಿದ ತರಬೇತಿಯನ್ನು ಇಕೋ-ಝೋನ್‌ನ ಸಂಪನ್ಮೂಲ ವ್ಯಕ್ತಿಗಳು ನಡೆಸಿಕೊಟ್ಟರು. ತರಬೇತಿಯಲ್ಲಿ ಚಿಟ್ಟೆಗಳ ಜೀವನ ಚಕ್ರ, ಆಹಾರ ಸರಪಳಿ, ಔಷಧೀಯ ಸಸ್ಯಗಳು, ಸಸ್ಯ-ಪ್ರಾಣಿ ವೈವಿಧ್ಯತೆಯನ್ನು ನಾವು ಶಾಲೆಗಳಲ್ಲಿ ಹೇಗೆ ಮಾಡಬೇಕು ಎನ್ನುವ ಪ್ರಾತ್ಯಕ್ಷಿಕಾ ಮಾಹಿತಿ ನೀಡಿದರು.
ಅನಂತರ ಮಕ್ಕಳು ನಾವು ಪಡೆದ ಮಾಹಿತಿಗೆ ಅನುಗುಣವಾಗಿ ಔಷಧೀಯ ಸಸ್ಯಗಳನ್ನು ನೆಡುವುದರೊಂದಿಗೆ ವಿವಿಧ ವಿಷಯಗಳ ಚಟುವಟಿಕೆಗಳಿಗೆ ಸಂಬಂಧಿಸಿ ಕಾರ್ಯಯೋಜನೆ ರೂಪಿಸಿದರು.




