ಮಕರ ಸಂಕ್ರಾಂತಿ ಆಚರಣೆ

ಇಂದು ಮಕರ ಸಂಕ್ರಮಣ….ಪರ್ವಕಾಲ…..

ಭಾರತೀಯರಲ್ಲಿ ಹಬ್ಬಗಳ ಆಚರಣಾ ಸಂಭ್ರಮಕ್ಕೆ ವೈಜ್ಞಾನಿಕ….ಧಾರ್ಮಿಕ…. ಸಾಂಸ್ಕೃತಿಕ…..ಮಹತ್ವವಿದೆ. ಎಲ್ಲಾ ಶಕ್ತಿಗಳ ಮೂಲ ಸೂರ್ಯನನ್ನು ಒಳಗೊಂಡಂತೆ ಪ್ರಕೃತಿಯ ಆರಾಧನೆಗೆ ಅನಾದಿ ಕಾಲದಿಂದಲೂ ಪೂಜನೀಯ ಸ್ಥಾನ ನೀಡುವುದರೊಂದಿಗೆ ಸಂರಕ್ಷಣಾ ಜವಾಬ್ದಾರಿ ಇರುವ ಮನುಷ್ಯನಿಗೆ ಈ ಎಲ್ಲಾ ಆಚರಣೆಗಳೂ ಸಂತೋಷದ ಜೊತೆಗೆ ಒಂದು ಪ್ರಾಕೃತಿಕ ಎಚ್ಚರಿಕೆ ನೀಡುತ್ತಿರುವುದು ಉಲ್ಲೇಖನೀಯ.

ಚಿಕ್ಕಂದಿನಿಂದಲೇ ನಮ್ಮಲ್ಲಿ ಈ ಬಗೆಯ ಪ್ರಜ್ಞೆ ಮೂಡಬೇಕು.ಈ ದಿಶೆಯಿಂದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲೂ ಮಕರ ಸಂಕ್ರಾಂತಿ ಆಚರಿಸಲಾಯಿತು. ಸೂರ್ಯನ ಬೆಳಗ್ಗಿನ ಪ್ರಶಾಂತ ಕಿರಣಗಳಿಗೆ ಮೈ ಒಡ್ಡುವ ಸಲುವಾಗಿ ಪೂರ್ವ ಪ್ರಾಥಮಿಕದಿಂದ 10 ನೆ ತರಗತಿಯ ಮಕ್ಕಳು ಹಾಗೂ ಶಿಕ್ಷಕರು ಶಾಲಾ ಮೈದಾನದಲ್ಲಿ ಬರಿಗಾಲ ನಡುಗೆಯಲ್ಲಿ ಪಾಲುಗೊಂಡರು.

ಅನಂತರ 9 ನೆ ತರಗತಿಯ ಎಲ್ಲಾ ಮಕ್ಕಳನ್ನು 22 ಗುಂಪುಗಳನ್ನಾಗಿ ಮಾಡಿ ,ಪೂರ್ವ ಪ್ರಾಥಮಿಕದಿಂದ 10 ನೆ ತರಗತಿಯವರೆಗೆ ಈ ಗುಂಪುಗಳನ್ನು ಕಳುಹಿಸಲಾಯಿತು.

ಆಯಾಯ ಗುಂಪಿನ ಮಕ್ಕಳು ಎಳ್ಳು…..ಬೆಲ್ಲ…. ನೆಲಕಡಲೆ…..ಕೊಬ್ಬರಿಯ ಪಾಕವನ್ನು ಅವರಿಗೆ ನೀಡಿದ ತರಗತಿಯ ಎಲ್ಲಾ ಮಕ್ಕಳಿಗೆ ಹಂಚಿ ಮಕರ ಸಂಕ್ರಾಂತಿಯ ಮಹತ್ವ ತಿಳಿಸಿದರು.

ನಮ್ಮ ಶಿಕ್ಷಕರ ತಂಡ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪುತ್ತೂರಿನ ಜೀವ ವಿಮಾ ನಿಗಮ ಆಫೀಸಿಗೆ ತೆರಳಿ ಎಳ್ಳು – ಬೆಲ್ಲ ಹಂಚಿ ಒಳ್ಳೆ ಮಾತನಾಡುವ ಸಂದೇಶ ನೀಡಿದರು.

Highslide for Wordpress Plugin