ದಿನಾಂಕ 25-10-2012ರಂದು ವಿವೇಕಾನಂದ ವಿದ್ಯಾ ಸಂಸ್ಧೆಯ ಶಿಕ್ಷಕರಿಗಾಗಿ ಮೂರು ದಿನಗಳ ಶೈಕ್ಷಣಿಕ ಕಾರ್ಯಾಗಾರವು ಉದ್ಘಾಟನೆಗೊಂಡಿತು. ಈ ಕಾರ್ಯಾಗಾರವನ್ನು ದೀಪ ಬೆಳಗಿಸುವುದರ ಮೂಲಕ ತಾಲೂಕು ಪಂಚಾಯಿತಿನ ಅಧ್ಯಕ್ಷರಾದ ಶ್ರೀಮತಿ ಶಶಿಪ್ರಭಾ ಸಂಪ್ಯರವರು ಉದ್ಘಾಟಿಸಿದರು.
ವೇದಿಕೆಯಲ್ಲಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಶಿವಪ್ರಸಾದ ಇ. ಹಾಗೂ ವಿವೇಕಾನಂದ ಆಂಗ್ಲ ಮತ್ತು ಕನ್ನಡ ಮಾದ್ಯಮಾ ಶಾಲೆಯ ಮುಖ್ಯಗುರುಗಳಾದ ಶ್ರೀ ಸತೀಶ್ ರೈ, ಶ್ರೀಮತಿ ಅಶಾಬೆಳ್ಳಾರೆ ಉಪಸ್ಧಿತರಿದ್ದರು.
ನಂತರದ ಅವಧಿಯಲ್ಲಿ ಪಠ್ಯಕ್ರಮ ಮತ್ತು ಭೋಧನೆ ಎಂಬ ವಿಷಯದಲ್ಲಿ ಕಾರ್ಯಾಗಾರವನ್ನು ಶ್ರೀ ಡಾ| ಸುಂದರ ಕೇನಾಜೆ ತೆಗೆದುಕೊಂಡರು. ಬಳಿಕ ತಂಡ ಸ್ಫೊರ್ತಿ ಎಂಬ ವಿಷಯದಲ್ಲಿ ಪ್ರೋ ಶ್ರೀ ಕೃಷ್ಣಮೂರ್ತಿ(ಪ್ರಾದ್ಯಾಪಕರು ಎಸ್. ಡಿ. ಎಂ ಉಜಿರೆ) ಮಾಹಿತಿ ನೀಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿ ಕು | ಲೀಲಾವತಿ ಹಂದ್ರಟ್ಟ ಹಾಗೂ ಸ್ವಾಗತವನ್ನು ವಿವೇಕಾನಂದ ಕನ್ನಡಮಾದ್ಯಮ ಶಾಲೆಯ ಮುಖ್ಯಶಿಕ್ಷಕಿ ಶ್ರೀಮತಿ ಆಶಾ ಬೆಳ್ಳಾರೆ ನೆರವೇರಿಸಿದರು.