ವಿಶ್ವದಲ್ಲಿ ಭಾರತದ ಬಗೆಗಿನ ನಕಾರಾತ್ಮಕ ದೃಷ್ಟಿಕೋನಕ್ಕೆ ವೈಚಾರಿಕವಾಗಿ ಸಕಾರಾತ್ಮಕ ಉತ್ತರ ನೀಡಿದ ಧೀಮಂತ ವ್ಯಕ್ತಿತ್ವ ಸ್ವಾಮಿ ವಿವೇಕಾನಂದ. ಬಾಲ್ಯದಿಂದಲೇ ಅವರ ಈ ಬಗೆಯ ಚಿಂತನೆಗಳನ್ನು ನಾವು ತಿಳಿದುಕೊಳ್ಳಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ನಮ್ಮೀ ಆಚರಣೆಗೆ ಮಹತ್ವ ಬರಬೇಕು ಎಂದು ನುಡಿದವರು ಶಾಲಾ ಅಧ್ಯಕ್ಷರಾದ ಶ್ರೀ ರಮೇಶ್ಚಂದ್ರ ಇವರು.


ವಿವೇಕಾನಂದ ಕನ್ನಡ ಶಾಲೆಯಲ್ಲಿ ಜನವರಿ 12 ರಂದು ಆಚರಿಸಲಾದ ವಿವೇಕಾನಂದ ಜಯಂತಿಯಂದು ಆಯೋಜಿಸಲಾದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ಶಾಲಾ ಮಕ್ಕಳ ವಿವೇಕವಾಣಿ, ಬಾಲ್ಯದ ಕಥೆ, ಚಾಗಿ ಹಾಡು ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತು.
ಶಾಲಾ ಸಂಚಾಲಕರಾದ ವಸಂತ ಸುವರ್ಣ, ಮುಖ್ಯಗುರುಗಳು ಹಾಗೂ ಶಿಕ್ಷಕವೃಂದದ ಉಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮವನ್ನು ಸಹ ಶಿಕ್ಷಕಿ ಅನುಷಾ ಅವರು ನಿರ್ವಹಿಸಿದರು.