’ಸಂವಿಧಾನ ದಿನಾಚರಣೆ’

ಒಂದು ಮನೆಯು ಸುಸೂತ್ರವಾಗಿ ನಡೆಯಲು ಕೆಲವಾರು ಪ್ರಗತಿಪರ ನಿಯಮಗಳಿವೆ. ಒಂದು ಶಾಲೆ ಉತ್ತಮವಾಗಿ ನಡೆಯಲು ಹಲವಾರು ಶಾಲಾ ನಿಯಮಗಳಿಗೆ ಬದ್ಧರಾಗಿ ನಡೆಯಬೇಕಾಗುತ್ತದೆ. ಅದೇ ರೀತಿ ನಮ್ಮೀ ಭಾರತ ದೇಶ ವ್ಯವಸ್ಥಿತ ಹಾಗೂ ಅಭಿವೃದ್ಧಿಯತ್ತ ಮುನ್ನಡೆಯಲು ನಮ್ಮ ಸಂವಿಧಾನವೇ ನಮಗೆ ಕೈಮರವಾಗಿದೆ. ಇದು ಸರಕಾರ ಹಾಗೂ ಜನರ ನಡುವೆ ಉತ್ತಮ ಬಾಂಧವ್ಯ ಮೂಡಿಸುವ ಸೇತು ಆಗಿದೆ. – ತನ್ಮಯ್ ಕೃಷ್ಣ – ವಿದ್ಯಾರ್ಥಿ

ನವಂಬರ್ 26 ಸ್ವತಂತ್ರ ಭಾರತದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹತ್ವದ ದಿನ. ಡಾ. ಬಿ.ಆರ್ ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸುವ ದಿನ ನವೆಂಬರ್ 26. ಮಾನನೀಯ ಪ್ರಧಾನ ಮಂತ್ರಿಗಳು 2015 ರ ನವಂಬರ್ 26 ರಂದು ಡಾ. ಅಂಬೇಡ್ಕರ್ ಅವರ 125 ನೇ ಜನ್ಮದಿನಾಚರಣೆಯ ನೆನಪಿಗಾಗಿ ಈ ದಿನವನ್ನು ಸಂವಿಧಾನ ದಿನವೆಂದು ಘೋಷಿಸಿದರು. – ಧಾತ್ರಿ ಆರ್ ರೈ- ವಿದ್ಯಾರ್ಥಿನಿ

ಭಾರತ ಸಂವಿಧಾನವನ್ನು ಜಗತ್ತಿನ ಅತಿದೊಡ್ಡ ಸಂವಿಧಾನ ಎಂದು ಹೇಳಲಾಗುತ್ತದೆ. ಇಂತಹ ಬೃಹತ್ ಸಂವಿಧಾನ ಎಂದು ಹೇಳಲಾಗುತ್ತದೆ. ಇಂತಹ ಬೃಹತ್ ಸಂವಿಧಾನವನ್ನು 1950 ಜನವರಿ 26 ರಂದು ಜಾರಿಗೆ ತರಲಾಯಿತು. ಆ ದಿನವೇ ಗಣರಾಜ್ಯ ದಿನ. ಈ ದಿನದಂದು ಸಂವಿಧಾನದ ಮಹತ್ವ ಹಾಗೂ ಅಂಬೇಡ್ಕರ್ ರವರ ವಿಚಾರಧಾರೆಗಳನ್ನು ಜನರಲ್ಲಿ ಮೂಡಿಸುವ ಸಲುವಾಗಿ ಆಚರಿಸುತ್ತಾ ಬಂದಿರುವುದು ಅರ್ಥಪೂರ್ಣವಾಗಿದೆ. – ಅಭಿಶ್ರೀ- ವಿದ್ಯಾರ್ಥಿನಿ

ವಿವೇಕಾನಂದ ಕನ್ನಡ ಶಾಲೆಯಲ್ಲಿ ಸಂವಿಧಾನ ದಿನವಾದ ನವಂಬರ್ 26 ರ ಮಹತ್ವ ಮತ್ತು ಅಂಬೇಡ್ಕರ್‌ ಅವರ ವಿಚಾರಧಾರೆಗಳನ್ನು ಶಾಲಾ ವಿದ್ಯಾರ್ಥಿಗಳು ಮೇಲಿನಂತೆ ತಿಳಿಸಿದರು. ಶಾಲಾ ಮುಖ್ಯಗುರುಗಳು ಹಾಗೂ ಶಿಕ್ಷಕವೃಂದ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Highslide for Wordpress Plugin