ವಿದ್ಯಾಧ್ವನಿ – ಶೈಕ್ಷಣಿಕ ಅರಿವು ವೇದಿಕೆಯಿಂದ ಪೋಷಕರ ಸಭೆ

ವಿವೇಕಾನಂದ ಕನ್ನಡ ಶಾಲೆಯಲ್ಲಿ 6 ರಿಂದ 9 ನೇ ತರಗತಿಯ ಮಕ್ಕಳ ಪೋಷಕರ ಸಭೆಯನ್ನು ವಿಭಾಗಶಃ ಆಯಾ ತರಗತಿಗಳಲ್ಲಿ ನಡೆಯಿತು. ಪ್ರಸ್ತುತ ಸಮಯದಲ್ಲಿ ಮಕ್ಕಳ ಶೈಕ್ಷಣಿಕ ತೊಡಗಿಸಿಕೊಳ್ಳುವಿಕೆ, ಮನೆ ಕಾರ್ಯಗಳನ್ನು ಮಾಡಲು ನೀಡುತ್ತಿರುವ ಸಮಯ ಶಾಲಾ ಪಠ್ಯಗಳಲ್ಲಿ ಅವರಿಗೆ ನೀಡುತ್ತಿರುವ ಸಮಯ, ಶಾಲಾ ಪಠ್ಯಗಳಲ್ಲಿ ಅವರಿಗೆ ಆಗುತ್ತಿರುವ ತೊಡಕುಗಳ ಬಗ್ಗೆ ಪೋಷಕರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಅನಂತರ ಅಮಧ್ಯಾವಧಿ ಪರೀಕ್ಷೆಯ ಉತ್ತರ ಪತ್ರಿಕೆ ಹಾಗೂ ಪ್ರಗತಿ ಪತ್ರವನ್ನು ಪೋಷಕರಿಗೆ ನೀಡಲಾಯಿತು. ಶಾಲಾ ದಿನಗಳು ಪುನರಾರಂಭಗೊಂಡು, ಶೈಕ್ಷಣಿಕ ವಿಚಾರಗಳು ನಡೆಯುತ್ತಿರುವ ಬಗ್ಗೆ ಹರ್ಷ ಪೋಷಕರು ಹರ್ಷ ವ್ಯಕ್ತಪಡಿಸಿದರು.

Highslide for Wordpress Plugin