ಕನಕ ಜಯಂತಿ ಆಚರಣೆ

“ದಾಸವರೇಣ್ಯರಲ್ಲಿ ಕನ್ನಡಿಗರ ಹೃದಯದಲ್ಲಿ ವಿಶೇಷ ಸ್ಥಾನಮಾನವನ್ನು ಹೊಂದಿರುವವರು ಕನಕದಾಸರು. ಕನ್ನಡ ಸಾಹಿತ್ಯಕ್ಕೆ ಇವರ ಕೊಡುಗೆ ಅಪಾರ. ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು ಹಾಗೂ ಮುಂಡಿಗೆಗಳು ಸಂಗೀತ ಪ್ರಪಂಚದ ಅಮೋಘರತ್ನಗಳಾಗಿವೆ” ಕುಮಾರಿ ಸಂಹಿತಶರ್ಮ ವಿದ್ಯಾರ್ಥಿನಿ.

ವಿವೇಕಾನಂದ ಕನ್ನಡ ಶಾಲೆಯಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳ ನೇತೃತ್ವದಲ್ಲಿ ಕನಕಜಯಂತಿ ವಿಶಿಷ್ಟ ರೀತಿಯಲ್ಲಿ ಆಚರಿಸಲ್ಪಟ್ಟಿತು. ಇನ್ನೋರ್ವ ವಿದ್ಯಾರ್ಥಿನಿ ಮಾತನಾಡುತ್ತಾ “ಕನಕದಾಸರ ಬಾಲ್ಯ, ಆಧ್ಯಾತ್ಮಿಕ, ಸಾಮಾಜಿಕ ಕಳಕಳಿ ಅನುಕರಣೀಯವಾದುದು. ‘ನಾನು’ ಎಂಬ ಅಹಂಕಾರ ಭಾವ ಹೋದಾಗ ಒಬ್ಬ ವ್ಯಕ್ತಿ ನೈಜ ವ್ಯಕ್ತಿಯಾಗುತ್ತಾನೆ. ಕನಕದಾಸರ ಸರಳ ಭಾಷಾಶೈಲಿ ಪ್ರಸ್ತುತ ಸಂದರ್ಭಗಳಲ್ಲೂ ನಾವು ಅವರ ಕೀರ್ತನೆಗಳನ್ನು ಹಾಡಲು ಮತ್ತು ಆನಂದಿಸಲು ಸಹಕಾರಿಯಾಗಿದೆ” ಎಂದರು.

ಕಾರ್ಯಕ್ರಮದ ಅಂಗವಾಗಿ ಕುಮಾರಿ ಆಕಾಂಕ್ಷಾ ಇವರು ಕನಕದಾಸರ ಕೀರ್ತನೆಗಳನ್ನು ಸುಶ್ರಾವ್ಯವಾಗಿ ಹಾಡಿದರು. ಪ್ರಾಥಮಿಕ ಶಾಲಾ ಮುಖ್ಯಗುರುಗಳಾದ ಶ್ರೀಮತಿ ನಳಿನಿ ವಾಗ್ಲೆ, ಹಿರಿಯ ಶಿಕ್ಷಕಿ ಲೀಲಾವತಿ ಅವರು ಉಪಸ್ಥಿತರಿದ್ದರು. ಪ್ರೌಢಶಾಲಾ ಮುಖ್ಯಗುರುಗಳಾದ ಆಶಾಬೆಳ್ಳಾರೆ ಉಪಸ್ಥಿತರಿಗೆ ವಂದನೆ ಸಲ್ಲಿಸಿದರು. ಸರಸ್ವತಿ ವಂದನೆಯೊಂದಿಗೆ ಆರಂಭವಾದ ಕಾರ್ಯಕ್ರಮ ಶಾಂತಿಮಂತ್ರದೊಂದಿಗೆ ಸಂಪನ್ನಗೊಂಡಿತು.

Highslide for Wordpress Plugin