ಸಾಂಸ್ಕೃತಿಕ ಸಮನ್ವಯ ಪ್ರತಿಭಾ ದಿನಾಚರಣೆ

ವಿದ್ಯಾರ್ಥಿ ಬದುಕಿನಲ್ಲಿ ಶೈಕ್ಷಣಿಕ ಚಟುವಟಿಗಳಷ್ಟೇ ಪ್ರಾಮುಖ್ಯತೆ ಹೊಂದಿರುವ ವ್ಯಕ್ತಿತ್ವ ವಿಕಸನ ಭಾಗವೇ ಸಾಂಸ್ಕೃತಿಕ ಚಟುವಟಿಕೆಯಾಗಿದೆ. ಈ ನಿಟ್ಟಿನಲ್ಲಿ ಮಕ್ಕಳಿಗೆ ಸಾಂಸ್ಕೃತಿಕ ವೈವಿಧ್ಯತೆಯ ಪರಿಚಯ ಮಾಡಿಸುವ ಶಾಲಾ ಪ್ರಯತ್ನ ಶ್ಲಾಘನೀಯ ಎಂದು ಶ್ರೀಮತಿ ಕೃಷ್ಣವೇಣಿ ಮುಳಿಯ ಇವರು ಮಕ್ಕಳ ದಿನಾಚರಣೆಯ ಪ್ರಯುಕ್ತ ಪ್ರೌಢಶಾಲಾ ಮಕ್ಕಳಿಗೆ ಏರ್ಪಡಿಸಿದ ಸಾಂಸ್ಕೃತಿಕ ಸಮನ್ಯಯ ಕಾರ್ಯಕ್ರಮಕ್ಕೆ ತೀರ್ಪುಗಾರರಾಗಿ ಆಗಮಿಸಿದ್ದರು.

ಇವರ ಜೊತೆ ಮೂಕಾಂಬಿಕಾ ಕಲ್ಚರಲ್ ಅಕಾಡಮಿ ನಿರ್ದೇಶಕಿ ವಿದುಷಿ ಪ್ರೀತಿಕಲಾ ಹಾಗೂ ಸರಕಾರಿ ಪದವಿಪೂರ್ವ ಕಾಲೇಜು ಕೊಂಬೆಟ್ಟು ಇಲ್ಲಿನ ಚಿತ್ರಕಲಾ ಶಿಕ್ಷಕರಾದ ಜನಾರ್ಧನ ಅರಿಯಡ್ಕ ಇವರು ಆಗಮಿಸಿ ಮಕ್ಕಳ ಸೃಜನಾತ್ಮಕ ಪ್ರದರ್ಶನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರೌಢ ಶಾಲಾ ಕನ್ನಡ ಪಠ್ಯ ವಿಷಯಕ್ಕೆ ಸಂಬಂಧಿಸಿದ ಗದ್ಯ ಹಾಗೂ ಪದ್ಯ ಭಾಗಗಳಿಂದ ಆಯ್ಕೆ ಮಾಡಲಾದ ಹಾಡು, ನೃತ್ಯ, ಕವಿ- ಸ್ವಗತ ಹಾಗೂ ಮೌಲ್ಯಾಧಾರಿತ ಪ್ರಹಸನವನ್ನು ಪ್ರಸ್ತುತಪಡಿಸುವ ಅವಕಾಶ ನೀಡಲಾಗಿತ್ತು. ವಿಭಾಗವಾರು ಏರ್ಪಡಿಸಲಾದ ಸ್ಪರ್ಧೆಯಲ್ಲಿ ಯಾವುದೇ ರೆಕಾರ್ಡ್ ಹಾಡುಗಳಿಗೆ ಅವಕಾಶ ನೀಡದೆ ಮಕ್ಕಳೇ ಸಂಗೀತ ಸಂಯೋಜನೆ ಮಾಡಿ ಹಾಡಿದ್ದು ಕಾರ್ಯಕ್ರಮದ ವಿಶೇಷವಾಗಿತ್ತು.

Highslide for Wordpress Plugin