ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ

ಕನ್ನಡ ರಾಜ್ಯೋತ್ಸವದಂದು ಶಾಲಾ ಕನ್ನಡ ಸಂಘ ವಿದ್ಯಾಧ್ವನಿಯ ಆಯೋಜನೆಯಲ್ಲಿ ಪಠ್ಯ-ಪದ್ಯಗಳ ಸಾಹಿತ್ಯಿಕ ಹಿನ್ನಲೆ ಹಾಗೂ ರಾಗ ಸಂಯೋಜಿತ ಗೀತ ಗಾಯನ ಕಾರ್ಯಕ್ರಮ ನಡೆಯಿತು. ಅಭ್ಯಾಗತರಾಗಿ ಆಗಮಿಸಿದ ನಿವೃತ್ತ ಮುಖ್ಯಗುರುಗಳಾದ ಶ್ರೀಮತಿ ರೂಪಕಲಾ ಇವರು ಪ್ರೌಢಶಾಲಾ ಮಕ್ಕಳಿಗೆ ಮಾತನಾಡಿ ಕನ್ನಡ ಪಠ್ಯದ ಪದ್ಯ ಭಾಗವು ಭಾಷಾ ಜ್ಞಾನದ ಬೆಳವಣಿಗೆಗೆ ಸಹಕಾರಿಯಾಗಬೇಕು. ಸಾಹಿತ್ಯಾಸಕ್ತಿ ಬೆಳೆದಾಗ ಕನ್ನಡ ಭಾಷಾ ಸಂಪತ್ತಿನ ಬಗ್ಗೆ ನಮ್ಮಲ್ಲಿ ಅರಿವು ಮೂಡಲು ಸಾಧ್ಯ ಎಂದರು. ಅನಂತರ ಪ್ರಾಥಮಿಕ, ಪ್ರೌಢಶಾಲಾ ಮಕ್ಕಳು ಹಾಗೂ ಶಿಕ್ಷಕರಿಂದ ಕನ್ನಡ ಹಾಡುಗಳ ಗಾಯನದೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು.

Highslide for Wordpress Plugin