ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಆಯೋಜಿಸಿದ ವಿದ್ಯಾಧ್ವನಿ ಶೈಕ್ಷಣಿಕ ಅರಿವು ಎಂಬ ಪರಿಕಲ್ಪನೆಯ ಅಡಿಯಲ್ಲಿ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಯವರ ಜಯಂತಿಯನ್ನು ಆಚರಿಸಲಾಯಿತು. ಬದಲಾಗುತ್ತಿರುವ ಈ ಕಾಲಘಟ್ಟದಲ್ಲಿ ಉತ್ತಮ ಮೌಲ್ಯಗಳು, ನೈತಿಕ ಪ್ರಜ್ಞೆ ಇತ್ಯಾದಿಗಳ ಬಗ್ಗೆ ಪ್ರಸ್ತುತ ಪೀಳಿಗೆಗೆ ಅರಿವು ಮೂಡಿಸಬೇಕಾದ ಅಗತ್ಯತೆ ಅತ್ಯವಶ್ಯಕವಾಗಿದೆ. ರಾಷ್ಟ್ರಪಿತ ಗಾಂಧೀಜಿ, ಭಾರತ ರತ್ನ ಲಾಲ್ ಬಹದ್ದೂರ್ ಶಾಸ್ತ್ರೀಯವರು ನಡೆಸಿದ ಆದರ್ಶ ಜೀವನವು ಎಲ್ಲರಿಗೂ ಮಾರ್ಗದರ್ಶನ ನೀಡಬಲ್ಲದು. ’ಮಾಡಿ ಇಲ್ಲವೇ ಮಡಿ’ ಎಂಬಂತಹ ದಿಟ್ಟ ನಿರ್ಧಾರಗಳು ’ಜೈ ಜವಾನ್ ಜೈ ಕಿಸಾನ್’ ಎನ್ನುವಂತಹ ಘೋಷವಾಕ್ಯಗಳು ದೇಶ ಕಾಯುವ ಯೋಧ, ದೇಶಕ್ಕೆ ಅನ್ನ ನೀಡುವ ರೈತ ಎಲ್ಲರಿಗೂ ಇರುವ ಪ್ರಾಮುಖ್ಯತೆಯನ್ನು ತಿಳಿಸುತ್ತದೆ. ಇದು ಇಂದಿಗೂ ಪ್ರಸ್ತುತವೇ ಆಗಿದೆ. ಎಂದಿ ಮುಖ್ಯ ಅತಿಥಿಯಾದ ಶಾಲಾ ಹಿರಿಯ ಶಿಕ್ಷಕಿ ಪೂರ್ಣಿಮಾ ಮಾತಾಜಿ ಹೇಳಿದರು.




ಮಹಾತ್ಮ ಗಾಂಧೀಜಿಯವರ ಚಿಂತನೆಗಳು, ಧೋರಣೆಗಳು ಅವರು ತೆಗೆದುಕೊಂಡ ನಿರ್ಧಾರಗಳು ಇತ್ಯಾದಿಗಳ ಬಗ್ಗೆ ಪುನರ್ವಿಮಶೆ ನಡೆಸಿ ಉತ್ತಮ ಅಂಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಶಾಸ್ತ್ರೀಜಿಯವರ ದಿಟ್ಟ ನಿರ್ಧಾರಗಳು, ಸರಳ ಜೀವನವು ದೇಶದ ನಾಯಕನಲ್ಲಿ ಇರಬೇಕಾದಂತಹ ಗುಣಲಕ್ಷಣಗಳನ್ನು ಎತ್ತಿ ತೋರಿಸುತ್ತದೆ. ಎನ್ನುವ ಮಾತನ್ನು ಅಧ್ಯಕ್ಷಿಂii ನೆಲೆಯಲ್ಲಿ ಶಾಲಾ ಸಂಚಾಲಕರಾದ ಶ್ರೀ ರವಿನಾರಾಯಣ ತಿಳಿಸಿದರು. ವಿದ್ಯಾರ್ಥಿಗಳಾದ ಪರೀಕ್ಷಿತ್ ಗಾಂಧೀಜಿಯವರ ಬಾಲ್ಯ ಮತ್ತು ಶಿಕ್ಷಣ, ತನ್ಮಯ್ ಕೃಷ್ಣ ಲಾಲ್ ಬಹದ್ದೂರ್ ಶಾಸ್ತ್ರೀಯವರ ಬಾಲ್ಯ, ಮಿಥುನ್ ಗಾಂಧೀಜಿಯವರ ಸ್ವದೇಶಿ ಚಿಂತನೆ- ಧಾತ್ರಿ ಜೈ ಜವಾನ್ – ಜೈ ಕಿಸಾನ್ ಶಾಸ್ತ್ರೀ ಚಿಂತನೆ, ಅವನಿ ರಾಷ್ಟ್ರೀಯ ಶಿಕ್ಷಣ ನೀತಿ ಗಾಂಧೀಜಿಯವರ ಬುನಾದಿ ಶಿಕ್ಷಣ, ಸಂಜನ್ ಜಗದೀಶ್ ಲಾಲ್ ಬಹದ್ದೂರ್ ಶಾಸ್ತ್ರೀಯವರ ರಾಜಕೀಯ ಬದುಕು ಎನ್ನು ವಿಷಯದ ಬಗ್ಗೆ ಚಿಂತನೆಯನ್ನು ಮಂಡಿಸಿದರು.
ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರೀಯವರ ಭಾವಚಿತ್ರಕ್ಕೆ ಪುಷ್ಫಾರ್ಚನೆ ಹಾಗೂ ವಿದ್ಯಾರ್ಥಿಗಳ ಗಾನನಮನದೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ರಮೇಶ್ಚಂದ್ರ , ಸದಸ್ಯರಾದ ಶೇಖರ್ ನಾರಾವಿ ಉಪಸ್ಥಿತರಿದ್ದರು. ಶ್ರೀಮತಿ ಶ್ರೀಲತಾ ಮಾತಾಜಿ ನಿರೂಪಿಸಿದ ಕಾರ್ಯಕ್ರಮದಲ್ಲಿ ಶ್ರೀಮತಿ ಕೃಪಾ ಮಾತಾಜಿ ಸ್ವಾಗತಿಸಿ, ಧನ್ಯವಾದ ಸಮರ್ಪಿಸಿದರು.