ವಿದ್ಯಾಧ್ವನಿ – ಶೈಕ್ಷಣಿಕ ಅರಿವು

ಸ್ಪರ್ಧಾತ್ಮಕ ಪರೀಕ್ಷೆ ಮಾಹಿತಿ ಕಾರ್ಯಾಗಾರ

ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ದಿನಾಂಕ 14-09-2021 ರಂದು ’ವಿದ್ಯಾಧ್ವನಿ – ಶೈಕ್ಷಣಿಕ ಅರಿವು’ ಎಂಬ ಯೋಜನೆಯಡಿಯಲ್ಲಿ ಎನ್.ಟಿ.ಎಸ್.ಇ ಪರೀಕ್ಷೆಯ ಮಾಹಿತಿ ನೀಡುವ ಕಾರ್ಯಾಗಾರವು ನಡೆಯಿತು. ಎನ್.ಟಿ.ಎಸ್.ಇ ಪರೀಕ್ಷೆಯ ರೂಪುರೇಷೆಯನ್ನು ವಿವೇಕಾನಂದ ಪದವಿಪೂರ್ವ ಕಾಲೇಜಿನ ಗಣಿತ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಚಿನ್ಮಯಿ ಮಯ್ಯರವರು ನೀಡಿದರು.

ಪರೀಕ್ಷೆ ತಯಾರಿ ಹಾಗೂ ಸಮಯದ ಹೊಂದಾಣಿಕೆಯ ಬಗ್ಗೆ ಎನ್.ಟಿ.ಎಸ್.ಇ ಪರೀಕ್ಷೆಯ ಮೊದಲ ಹಂತದಲ್ಲಿ ರಾಜ್ಯಕ್ಕೆ 20ನೇ ಸ್ಥಾನ ಗಳಿಸಿದ ಆಶ್ರಯ.ಪಿ ಇವರು ವಿದ್ಯಾರ್ಥಿಗಳಿಗೆ ತಮ್ಮ ಅನುಭವದೊಂದಿಗೆ ತಿಳಿಸಿ ಅವರಿಗೆ ಸ್ಪೂರ್ತಿ ತುಂಬಿಸಿದರು. ಅಧ್ಯಕ್ಷ ಸ್ಥಾನ ವಹಿಸಿದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಕೋಶಾಧಿಕಾರಿ ಶ್ರೀಯುತ ವಸಂತ ಸುವರ್ಣರವರು ಸಂದರ್ಭೋಚಿತವಾಗಿ ಮಾತನಾಡಿದರು. ವೇದಿಕೆಯಲ್ಲಿ ಎನ್.ಟಿ.ಎಸ್.ಇ. ತರಬೇತಿ ನೀಡುವ ತಂಡದ ಸದಸ್ಯರಾದ ಶ್ರೀಮತಿ ಚೈತ್ರಾ ಯು.ವಿ, ಕು. ಶೃತಿ ಯುರವರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಆಕಾಂಕ್ಷ ಪ್ರಾರ್ಥಿಸಿ, ಶ್ರೀಮತಿ ಅನುಷಾ ಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin