ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ವಿವೇಕಾನಂದ ಆಯುರ್ವೇದ ಆಸ್ಪತ್ರೆ ಪುತ್ತೂರು, ರೇಡಿಯೋ ಪಾಂಚಜನ್ಯ 90.8 ಎಫ್.ಎಮ್ ಮತ್ತು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ತೆಂಕಿಲ, ಪುತ್ತೂರು ಇವುಗಳ ಜಂಟಿ ಆಶ್ರಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಯೋಜನೆಗಳಲ್ಲಿ ಒಂದಾದ ಆರೋಗ್ಯಮಿತ್ರ ಪರಿಕಲ್ಪನೆಯಲ್ಲಿ ಕೋವಿಡ್- 19 ರ ಜಾಗೃತಿ ಕಾರ್ಯಾಗಾರವು ದಿನಾಂಕ 6-9-2021 ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಯಿತು. ಈ ಕಾರ್ಯಕ್ರಮದ ಮೊದಲ ಅವಧಿಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಡಾ. ವಿಜಯ ಸರಸ್ವತಿ ಸಂಯೋಜಕರು, ಸ್ನಾತಕೋತ್ತರ ವಾಣಿಜ್ಯಶಾಸ್ತ್ರ ಅಧ್ಯಯನ ವಿಭಾಗ, ವಿವೇಕಾನಂದ ಕಾಲೇಜು ಪುತ್ತೂರು ಇವರು ಕೋವಿಡ್ – 19 ರ ಲಕ್ಷಣಗಳು ಮುಂದಿನ ದಿನಗಳಲ್ಲಿ ರೋಗದ ಬಗ್ಗೆ ಪೋಷಕರು ಮತ್ತು ಮಕ್ಕಳು ವಹಿಸಬೇಕಾದ ಜಾಗೃತಾ ಕ್ರಮಗಳನ್ನು ವಿವರಿಸಿದರು.



ಎರಡನೇ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಡಾ. ದೀಪಕ್ ಆರೋಗ್ಯಾಧಿಕಾರಿಗಳು ಪುತ್ತೂರು ತಾಲೂಕು ಇವರು ಆಗಮಿಸಿ ಪೋಷಕರೊಂದಿಗೆ ಕೊರೋನ ಮುನ್ನೆಚ್ಚರಿಕೆಯ ಬಗ್ಗೆ ಯಾವ ರೀತಿ ಕ್ರಮಕೈಗೊಳ್ಳಬಹುದು ಹಾಗೂ ಕೊರೋನ ಲಸಿಕೆಯ ಮಹತ್ವವನ್ನು ತಿಳಿಸಿದರು. ಅಂತೆಯೇ ಜನಸಂದಣಿ ಇರುವಲ್ಲಿ ಚಿಕ್ಕಮಕ್ಕಳನ್ನು ಕರೆದುಕೊಂಡು ಹೋಗಬೇಡಿ ಎಂದು ಪೋಷಕರಿಗೆ ಸಲಹೆ ನೀಡಿದರು.
ಮೂರನೇ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ರಾಷ್ಟ್ರೀಯ ಬಾಲ್ಯ ಸ್ವಾಸ್ಥ್ಯಾ ಕಾರ್ಯಕ್ರಮದಲ್ಲಿ ವೈದ್ಯಾಧಿಕಾರಿಗಳಾಗಿರುವ ಡಾ. ದೀಕ್ಷಾ ಇವರು ಮಾತನಾಡಿ ಮಾನಸಿಕ ಆಲೋಚನೆಗಳೇ ನಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಸತ್ವಯುತ ಆಹಾರ ಸೇವನೆ, ಯೋಗ ಪ್ರಾಣಾಯಾಮ ಇವುಗಳನ್ನು ಮಾಡುವುದರ ಮೂಲಕ ಕಾಯಿಲೆಯನ್ನು ನಮ್ಮಿಂದಲೇ ಹೋಗಲಾಡಿಸಲು ಸಾಧ್ಯ ಎಂಬುವುದಾಗಿ ಪೋಷಕರಿಗೆ ಮಾಹಿತಿಯನ್ನು ನೀಡಿದರು.
ಹಾಗೆಯೇ ಕಾರ್ಯಕ್ರಮದ ಮೊದಲ ಅವಧಿಯಲ್ಲಿ ಸಭಾಧ್ಯಕ್ಷರಾಗಿ ಶಾಲಾ ಆಡಳಿತ ಮಂಡಳಿಯ ಕೋಶಾಧಿಕಾರಿಗಳಾದ ಶ್ರೀಯುತ ವಸಂತ ಸುವರ್ಣ, ಎರಡನೇ ಅವಧಿಯಲ್ಲಿ ಸಭಾಧ್ಯಕ್ಷರಾಗಿ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಯುತ ಶೇಖರ್ ನಾರಾವಿಯವರು ಹಾಗೂ ಕೊನೆಯ ಅವಧಿಯಲ್ಲಿ ಸಭಾಧ್ಯಕ್ಷರಾಗಿ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಶ್ರೀಯುತ ರಮೇಶ್ಚಂದ್ರ ಉಪಸ್ಥಿತರಿದ್ದರು.
ಸಭೆಯಲ್ಲಿ ಮುಖ್ಯಗುರುಗಳಾದ ಶ್ರೀಮತಿ ನಳಿನಿ ವಾಗ್ಲೆಯವರು ಉಪಸ್ಥಿತರಿದ್ದರು. ಶಾಲಾ ಶಿಕ್ಷಕ ವೃಂದದವರು ಕಾರ್ಯಕ್ರಮದ ಸ್ವರೂಪವನ್ನು ಸಂಯೋಜಿಸಿದರು.