ಆರ್ಟ್ ಆಫ್ ಲಿವಿಂಗ್, ಪ್ರಗತಿ ಜನೌಷಧಿ ಕೇಂದ್ರ ಮತ್ತು ಬಿ.ಜೆ.ಪಿ ಮಹಿಳಾ ಮೋರ್ಛಾ ಪುತ್ತೂರು ಇದರ ವತಿಯಿಂದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ 7 ನೇ ತರಗತಿಯಿಂದ 9 ನೇ ತರಗತಿಯ ವಿದ್ಯಾರ್ಥಿನಿಯರಿಗಾಗಿ ’ಹೆಣ್ಣು ಮಕ್ಕಳ ಆರೋಗ್ಯ ಮತ್ತು ನೈರ್ಮಲ್ಯ’ಎಂಬ ವಿಷಯದ ಕುರಿತು ಆರ್ಟ್ ಆಫ್ ಲಿವಿಂಗ್ನ ಶಿಕ್ಷಕರಾದ ಶ್ರೀಮತಿ ಭಾರತಿ ಜಯರಾಮ್ ಅವರು ಮಾತನಾಡಿ ಜಗತ್ತಿನಲ್ಲಿ ಬದಲಾವಣೆ ಪ್ರಕೃತಿಯ ಸಹಜ ನಿಯಮ. ಅದರಲ್ಲಿ ಮಾನವ ದೇಹದ ಅದರಲ್ಲೂ ಮುಖ್ಯವಾಗಿ ಹೆಣ್ಣುಮಕ್ಕಳ ದೈಹಿಕ ಹಾಗೂ ಮಾನಸಿಕ ಬದಲಾವಣೆ ಹಾಗೂ ಆ ಸಂದರ್ಭದಲ್ಲಿ ನಾವು ಅನುಸರಿಸಬೇಕಾದ ಕ್ರಮಗಳ ಕುರಿತು ಮಾಹಿತಿ ನೀಡಿದರು. ವೇದಿಕೆಯಲ್ಲಿ ಆರ್ಟ್ ಆಫ್ ಲಿವಿಂಗ್ ನ ಶಿಕ್ಷಕರಾದ ಶ್ರೀಮತಿ ಸುಧಾ ಹೆಬ್ಬಾರ್ ಮತ್ತು ಬಿಜೆಪಿ ಮಹಿಳಾ ಮೋರ್ಛಾದ ಸದಸ್ಯರಾದ ಇಂದಿರಾ ರಾಘವ ಹಾಗೂ ಶಾಲಾ ಶಿಕ್ಷಕಿ ಶ್ರೀಮತಿ ನಮಿತಾ ಮಾತಾಜಿ ಉಪಸ್ಥಿತರಿದ್ದರು. ಶ್ರೀಮತಿ ಗೌತಮಿ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.



