ರಥ ಸಪ್ತಮಿ- ಸೂರ್ಯ ನಮಸ್ಕಾರ ಪ್ರಾತ್ಯಕ್ಷಿಕೆ

ಭಾರತೀಯ ಹಬ್ಬಗಳಲ್ಲಿ ಒಂದಾದ ರಥಸಪ್ತಮಿಯ ವೈಜ್ಞಾನಿಕ ಆಚರಣಾ ಮಹತ್ವ ಮತ್ತು ಸೂರ್ಯನಮಸ್ಕಾರದ ಪ್ರಾತ್ಯಕ್ಷಿಕೆ ನೀಡಿದ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮಕ್ಕಳು ಮೊದಲಿಗೆ ಶಾಲಾ ಆವರಣದಲ್ಲಿ ವಿಭಾಗಶಃ 6 ರಿಂದ 10 ನೇ ತರಗತಿಯ ಮಕ್ಕಳಿಂದ ಸೂರ್ಯ ಸ್ತುತಿಯೊಂದಿಗೆ ಪ್ರಾತ್ಯಕ್ಷಿಕೆ ನಡೆಯಿತು.

ವಿದ್ಯಾರ್ಥಿನಿಯರಾದ ಸಂಹಿತಾ ಶರ್ಮ ಹಾಗೂ ಧಾತ್ರಿ ರಥಸಪ್ತಮಿ ಸೂರ್ಯನಮಸ್ಕಾರದ ಆರೋಗ್ಯಕರ ಮಹತ್ವದ ಬಗ್ಗೆ ಮಾತನಾಡಿದರು. ಅನಂತರ ಮಕ್ಕಳ ತಂಡ ಪುತ್ತೂರು ತಾಲೂಕಿನ ಪತ್ರಿಕಾ ಭವನ, ನರೇಂದ್ರ ಪದವಿಪೂರ್ವ ಕಾಲೇಜಿಗೆ ತೆರಳಿ ಕಾರ್ಯಕ್ರಮ ನೀಡಿದರು. ಪುತ್ತೂರು ತಾಲೂಕು ಪತ್ರಕರ್ತರ ಸಂಘದ ಕಾರ್ಯದರ್ಶಿ ಐ.ಬಿ ಸಂದೀಪ್‌ಕುಮಾರ್‌, ಉಪಾಧ್ಯಕ್ಷ ಅನೀಶ್ ಮರೀಲ್ ಉಪಸ್ಥಿತರಿದ್ದು ಮಕ್ಕಳಿಗೆ ಶುಭಾಶಂಸನೆಯೊಂದಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನರೇಂದ್ರ ಪದವಿ ಪೂರ್ವಕಾಲೇಜಿನ ಪ್ರಾಂಶುಪಾಲರಾದ ಶ್ರೀಯುತ ಪ್ರಸಾದ್ ಶ್ಯಾನುಬಾಗ್ ಮಕ್ಕಳ ನಿರ್ವಹಣೆಗೆ ಅಭಿನಂದನೆ ಸಲ್ಲಿಸಿದರು.

ದೀಪಮಂತ್ರ ಮತ್ತು ಅರ್ಥದೊಂದಿಗೆ ಆರಂಭವಾದ ಪ್ರಾತ್ಯಕ್ಷಿಕೆ ಸ್ವಾಗತ, ಪ್ರಾರ್ಥನೆ, ರಥಸಪ್ತಮಿಯ ಆಚರಣಾ ಹಿನ್ನಲೆ- ಮಹತ್ವ, ಸೂರ್ಯಮಂತ್ರದೊಂದಿಗೆ ಸೂರ್ಯನಮಸ್ಕಾರದ ಆರೋಗ್ಯ ಮಾಹಿತಿ ನೀಡಿದ ಮಕ್ಕಳ ತಂಡ ವೈಯುಕ್ತಿಕ ಗೀತೆಯೊಂದಿಗೆ ಧನ್ಯವಾದ ಅರ್ಪಿಸಿದರು. ವಿದ್ಯಾರ್ಥಿಗಳಾದ ಪ್ರಣವ್, ಸಂಹಿತಾ, ಶ್ರೀಶ, ಚಿನ್ಮಯ, ಧಾತ್ರಿ, ದೀಪ್ತಿ, ಅವನಿ ಬೆಳ್ಳಾರೆ, ಧನ್ಯಶ್ರೀ, ನಿಶಿತಾ, ಅನುಷಾ, ಮೌನೇಶ್, ಮೌಲ್ಯಶ್ರೀ, ಕಾಂಚನ, ಸೌಜನ್ಯ, ದೀಪಿಕಾ ಕಾರ್ಯಕ್ರಮ ನಡೆಸಿಕೊಟ್ಟರು.

Highslide for Wordpress Plugin