1 ರಿಂದ 4 ನೇ ತರಗತಿಯ ಮಕ್ಕಳ ಪೋಷಕರ ಸಭೆ

ಪ್ರಸಕ್ತ ಶೈಕ್ಷಣಿಕ ವರ್ಷದ 1 ರಿಂದ 4 ನೇ ತರಗತಿಯ ಮಕ್ಕಳ ಪೋಷಕರ ಸಭೆಯು ನಡೆಯಿತು. ಸಭೆಯಲ್ಲಿ ಶಾಲಾ ಅಧ್ಯಕ್ಷರು, ಸಂಚಾಲಕರು, ಮುಖ್ಯಗುರುಗಳು, ಶಿಕ್ಷಕ ವೃಂದದವರು ಉಪಸ್ಥಿತರಿದ್ದರು. ಮಕ್ಕ್ಳ ಪೋಷಕರು ತಮ್ಮ ಮಕ್ಕಳ ಉತ್ತಮ ಕಲಿಕಾ ಚಟುವಟಿಕೆಗಳ ಬಗ್ಗೆ ಧನಾತ್ಮಕ ಅಂಶಗಳನ್ನು ವ್ಯಕ್ತಪಡಿಸಿದರು. ಮಕ್ಕಳ ಕಲಿಕೆಯಲ್ಲಿ ಶಿಕ್ಷಕರ ಶ್ರಮವನ್ನು ಪ್ರಶಂಸಿಸಿದರು.

ಶಾಲಾ ಸಂಚಾಲಕರಾದ ಶ್ರೀಯುತ ರವಿನಾರಾಯಣ ಇವರು ಮಕ್ಕಳ ಉತ್ತಮ ಪರಿಪೂರ್ಣ ವ್ಯಕ್ತಿತ್ವ ನಿರ್ಮಾಣದಲ್ಲಿ ಧನಾತ್ಮಕ ವಿಚಾರಗಳು ಹೆಚ್ಚು ಪ್ರಭಾವ ಬೀರುತ್ತವೆ. ಈ ನಿಟ್ಟಿನಲ್ಲಿ ಪೋಷಕರು ಮಕ್ಕಳನ್ನು ಪರಿಸರದ ವೀಕ್ಷಣೆಯೊಂದಿಗೆ ಬದುಕಿಗೆ ಅಗತ್ಯವಾದ ಹಲವಾರು ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವಂತೆ ಉತ್ತೇಜನ ನೀಡಬೇಕೆಂದು ಹೇಳಿದರು.

ಸಭೆಯಲ್ಲಿ ಉಪಸ್ಥಿತರಿದ್ದ ಸರ್ವರನ್ನು ಶ್ರೀಮತಿ ವೀಣಾ ಮಾತಾಜಿ ಸ್ವಾಗತಿಸಿ, ಕೃಪಾ ಮಾತಾಜಿ ನಿರೂಪಿಸಿದರು.

Highslide for Wordpress Plugin