8 ಹಾಗೂ 9 ನೇ ತರಗತಿಯ ವಿದ್ಯಾರ್ಥಿಗಳ ಪೋಷಕರ ಸಭೆ

ಶೈಕ್ಷಣಿಕ ಹಂತದ 8 ಹಾಗೂ 9 ನೇ ತರಗತಿಯ ವಿದ್ಯಾರ್ಥಿಗಳ 2020-21 ನೇ ಸಾಲಿನ ಪೋಷಕರ ಸಭೆಯು ಶಾಲಾ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ಶಾಲಾ ಅಧ್ಯಕ್ಷರಾದ ರಮೇಶ್ಚಂದ್ರ ಮಾತನಾಡಿ ಅಯೋಧ್ಯೆಯ ರಾಮ ಮಂದಿರ ನಿರ್ಮಾಣಕ್ಕಾಗಿ ನಾವು ಹೇಗೆ ಪರಿಶ್ರಮ ಪಡುತ್ತೇವೆಯೋ ಹಾಗೆಯೇ ಶಾಲಾ ಆಗುಹೋಗುಗಳ ಬಗ್ಗೆ ಗಂಭೀರವಾಗಿ ಚಿಂತಿಸಿ ಪೋಷಕರು ಸಹಾಯ ಹಸ್ತ ಚಾಚುವುದರ ಬಗ್ಗೆ ಸೂಚಿಸಿದರು.

ಮುಖ್ಯಗುರುಗಳಾದ ಶ್ರೀಮತಿ ಆಶಾಬೆಳ್ಳಾರೆ ಮಾತನಾಡಿ ಲಾಕ್‌ಡೌನ್ ಸಂದರ್ಭದಲ್ಲಿ ಮನೆಯಲ್ಲಿದ್ದ ಕೆಲವು ವಿದ್ಯಾರ್ಥಿಗಳು ತಮ್ಮ ವಿಶೇಷ ಕೌಶಲ್ಯವನ್ನು ಸದುಪಯೋಗ ಪಡಿಸಿಕೊಂಡು ಹೆತ್ತವರೊಂದಿಗೆ ಕೆಲಸ ಕಾರ್ಯಗಳಲ್ಲಿ ಕೈಜೋಡಿಸಿ ಸಂಪಾದನೆಯಲ್ಲಿ ತೊಡಗಿದುದರ ಬಗ್ಗೆ ಉಲ್ಲೇಖಿಸುತ್ತಾ, ವಿದ್ಯಾರ್ಥಿಗಳ ಸೃಜನಶೀಲತೆಗೆ ಪೋಷಕರು ಪ್ರೋತ್ಸಾಹಕೊಡಬೇಕು.ಇದರ ಜೊತೆಯಲ್ಲಿ ಪಠ್ಯಕಲಿಕೆಯಲ್ಲಿಯೂ ಸಹಕರಿಸಬೇಕೆಂದುಕರೆ ನೀಡಿದರು. ಶ್ರೀಮತಿ ಅನುಷಾ ಮಾತಾಜಿ ಸ್ವಾಗತಿಸಿ, ಪೂರ್ಣಿಮಾ ಮಾತಾಜಿ ಶೈಕ್ಷಣಿಕ ವಿಚಾರಗಳನ್ನು ಪ್ರಾಸ್ತಾವಿಕವಾಗಿ ತಿಳಿಸಿದರು. ಗೀತಾ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin