ಆಳ್ವಾಸ್ ವಿದ್ಯಾಸಂಸ್ಥೆಯವರು ನಡೆಸಿದ 36 ನೇ ಕರ್ನಾಟಕ ರಾಜ್ಯ ಜೂನಿಯರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ – 2020-21 ರಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 10 ನೇ ತರಗತಿಯ ವಿದ್ಯಾರ್ಥಿ ಮಹಮ್ಮದ್ ಆದಿಲ್ 16 ನೇ ವಯೋಮಾನದ ಬಾಲಕರ ವಿಭಾಗದ ಉದ್ದ ಜಿಗಿತದಲ್ಲಿ 6.73 ಮೀ ಜಿಗಿದು ಪ್ರಥಮ ಸ್ಥಾನದೊಂದಿಗೆ ನೂತನ ದಾಖಲೆ ಮಾಡಿದ್ದಾನೆ ಹಾಗೂ ೮೦ಮೀ ಹರ್ಡಲ್ಸ್‌ನಲ್ಲಿ ಕೂಡ ಪ್ರಥಮ ಸ್ಥಾನದೊಂದಿಗೆ ದಾಖಲೆ ಮಾಡಿರುತ್ತಾನೆ. ಇವನಿಗೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ದಾಮೋದರ ಹಾಗೂ ಹರಿಣಾಕ್ಷಿ ತರಬೇತಿ ನೀಡಿರುತ್ತಾರೆ.