ಭರತನಾಟ್ಯ – ಗಾನ- ವೈಭವ

ಯಾವುದೇ ಕಲೆಯ ಕಲಿಕೆ- ಅವಿರತ ಶ್ರಮ ಮತ್ತು ಕ್ರಿಯಾತ್ಮಕತೆಯನ್ನು ಅಪೇಕ್ಷಿಸುತ್ತದೆ. ವ್ಯಕ್ತಿಯನ್ನು ಅರಳಿಸುವ ಕೆಲಸ ಕಲೆಯಿಂದಾಗುತ್ತದೆ. ಆದ್ದರಿಂದ ಅದಕ್ಕೆ ತೆರೆದುಕೊಳ್ಳುವ ಮನಸ್ಸು ಮತ್ತು ಬುದ್ಧಿ ನಮ್ಮದಾಗಬೇಕು ಎಂದವರು ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕರು ಹಾಗೂ ಶ್ರೀ ಶಾರದಾ ಕಲಾ ಶಾಲೆ ಪುತ್ತೂರು ಇದರ ನೃತ್ಯಗುರುಗಳಾದ ವಿದ್ವಾನ್ ಸುದರ್ಶನ್ ಎಮ್.ಎಲ್ ಇವರು. ವಿವೇಕಾನಂದ ಕನ್ನಡ ಶಾಲೆಯ ಭರತನಾಟ್ಯ ಹಾಗೂ ಸಂಗೀತ ವಾರ್ಷಿಕೋತ್ಸವ ಮುಖ್ಯ ಅಭ್ಯಾಗತರಾಗಿ ಆಗಮಿಸಿದ್ದರು.

Bharata Gana (4)

Bharata Gana (1)

Bharata Gana (8)

Bharata Gana (2)

Bharata Gana (3)

Bharata Gana (5)

Bharata Gana (6)

Bharata Gana (7)

ಶಾಲೆಯ ಅಧ್ಯಕ್ಷರಾದ ಅಚ್ಯುತ ನಾಯಕ್ ಇವರು ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ಶಾಲೆಯಲ್ಲಿ ನಡೆಯುತ್ತಿರುವ ವಿವಿಧ ಪಠ್ಯಪೂರಕ ಚಟುವಟಿಕೆಗಳ ಪ್ರಸ್ತುತತೆ ಮತ್ತು ಮಹತ್ವವನ್ನು ತಿಳಿಸಿದರು. ಶಾಲಾ ಹಿರಿಯ ವಿದ್ಯಾರ್ಥಿನಿ ವಿವೇಕಾನಂದ ಪದವಿ ಕಾಲೇಜಿನ ಉಪನ್ಯಾಸಕಿ ವಿದುಷಿ ಅಕ್ಷತಾ ಇವರು ಕಾರ್ಯಕ್ರಮವನ್ನು ಉದ್ಘಾಟಿಸಿ ಭಾಷೆ ಯಾವತ್ತೂ ತೊಡಕಲ್ಲ ಇಚ್ಛಾಶಕ್ತಿಯೇ ಪ್ರಮುಖವಾಗಿದ್ದು ನನ್ನೀ ಇಚ್ಛೆಯನ್ನು ನೀರೆರೆದು ಪೋಷಿಸಿದ ಶಾಲೆ ಸದಾ ಸ್ಮರಣೀಯ ಎಂದರು. ವೇದಿಕೆಯಲ್ಲಿ ಶಾಲಾ ನೃತ್ಯಗುರುಗಳಾದ ವಿದ್ವಾನ್ ದೀಪಕ್ ಕುಮಾರ್, ವಿದುಷಿ ಪ್ರೀತಿಕಲಾ, ವಿದ್ವಾನ್ ದೀಪಕ್ ಕುಮಾರ್, ವಿದುಷಿ ಪ್ರೀತಿಕಲಾ, ವಿದ್ವಾನ್ ಗಿರೀಶ್ ಹಾಗೂ ಸಂಗೀತ ಗುರುಗಳಾದ ವಿದುಷಿ ಮಾಲಿನಿ ಕೃಷ್ಣಮೋಹನ್ ಉಪಸ್ಥಿತರಿದ್ದು ಗುರುವಂದನೆ ಸ್ವೀಕರಿಸಿ ಸಾಂದರ್ಭಿಕ ಮಾತುಗಳನ್ನಾಡಿದರು.

Highslide for Wordpress Plugin