ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸಹಭಾಗಿತ್ವದಲ್ಲಿ ಪುತ್ತೂರು ವೃತ್ತಮಟ್ಟದ ಪ್ರೌಢಶಾಲಾ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ 2019-20 ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ವಿಷ್ಣು ಪ್ರಸಾದ್ ಸಿ. ಉದ್ಘಾಟಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.




ಸಭಾಧ್ಯಕ್ಷತೆಯನ್ನು ವಹಿಸಿದ ಶಾಲಾ ಆಡಳಿತ ಮಂಡಳಿ ಸದಸ್ಯ ವಸಂತ ಸುವರ್ಣ ಮಾತನಾಡಿ ಗುರು ಪರಂಪರೆಗೆ ಮೊದಲ ಗೌರವ. ಗುರುವಿನ ಮುಖೇನ ಕಲಿತ ಕಲಿಕೆ ಶುದ್ಧ ಹಾಗೂ ಶಾಶ್ವತವಾಗುವುದು ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಶ್ರೀ ಸೀತಾ ರಾಘವ ಪದವಿಪೂರ್ವ ಕಾಲೇಜು ಇಲ್ಲಿನ ಪ್ರಾಚಾರ್ಯರಾದ ಕೆ.ಆರ್. ಗೋಪಾಲಕೃಷ್ಣ ಸ್ಪರ್ಧಾಳುಗಳಿಗೆ ಹಾಡಿನ ಮೂಲಕ ಸ್ಪೂರ್ತಿ ತುಂಬಿದರು.
ವೇದಿಕೆಯಲ್ಲಿ ಪುತ್ತೂರು ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕರಾದ ಶ್ರೀ ಸುಂದರಗೌಡ, ಪುತ್ತೂರು ನಗರ ಸಭಾ ಸದಸ್ಯರಾದ ಶ್ರೀಮತಿ ದೀಕ್ಷಾ ಪೈ, ಸಂಚಾಲಕರಾದ ರವಿನಾರಾಯಣ ಉಪಸ್ಥಿತರಿದ್ದರು. ಮುಖ್ಯಗುರುಗಳಾದ ಆಶಾ ಬೆಳ್ಳಾರೆ ಸ್ವಾಗತಿಸಿ, ವಲಯ ನೋಡಲ್ ಅಧಿಕಾರಿ ಶ್ರೀಯುತ ನಾರಾಯಣ ಕೆ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಶ್ರೀಮತಿ ಉಮಾಮೋಹನ್ ಕಾರ್ಯಕ್ರಮ ನಿರೂಪಿಸಿದರು.