ಸಾರ್ವಜನಿಕ ಶಿಕ್ಷಣ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಸರಕಾರಿ ಮಾದರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕೆಸರ್ಗದ್ದೆ ಬೆಳುವಾಯಿ ಇವರ ಸಹಯೋಗದಲ್ಲಿ ಸರಕಾರಿ ಮಾದರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕೆಸರ್ಗದ್ದೆ ಬೆಳುವಾಯಿ ಇಲ್ಲಿ ನಡೆದ ಜಿಲ್ಲಾಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಸುಚಿತಾ ಕೆ.ಎಸ್(9ನೇ ತರಗತಿ), ಹೇಮಶ್ರೀ (10ನೇ ತರಗತಿ), ಲಿಖಿತ್ ಗೌಡ (10ನೇ ತರಗತಿ), ಪುನೀತ್ ರಾಜ್ (10ನೇ ತರಗತಿ) ಭಾಗವಹಿಸಿರುತ್ತಾರೆ. ಇದರಲ್ಲಿ ಪ್ರೌಢಶಾಲಾ ಗುಂಪು ವಿಭಾಗದಲ್ಲಿ 10೦ನೇ ತರಗತಿ ಲಿಖಿತ್ ಗೌಡ ತೃತೀಯ ಸ್ಥಾನ ಪಡೆದು ಹಾಸನದಲ್ಲಿ ನಡೆಯುವ ಮೈಸೂರು ವಿಭಾಗಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ. ಇವನು ವೀರಮಂಗಲ ನಿವಾಸಿ ಬೆಳಿಯಪ್ಪ ಗೌಡ ಹಾಗೂ ಪದ್ಮಾವತಿ ದಂಪತಿಗಳ ಪುತ್ರ.
