ತ್ರೋಬಾಲ್ – ರಾಜ್ಯಮಟ್ಟಕ್ಕೆ ಆಯ್ಕೆ

ವಿದ್ಯಾಭಾರತಿ ಕರ್ನಾಟಕ, ದಕ್ಷಿಣ ಕನ್ನಡ ಹಾಗೂ ಶುಭೋದಯ ವಿದ್ಯಾಲಯ ವಾಮಂಜೂರು ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾಮಟ್ಟದ ತ್ರೋಬಾಲ್ ಪಂದ್ಯಾಟವು ಶುಭೋದಯ ವಿದ್ಯಾಲಯ ವಾಮಂಜೂರು ಮಂಗಳೂರು ಇಲ್ಲಿ ನಡೆದಿದ್ದು ಇದರಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಪ್ರೌಢಶಾಲಾ ವಿಭಾಗದ ಬಾಲಕಿಯರು ಪ್ರಥಮ ಸ್ಥಾನ ಪಡೆದು ಮೈಸೂರು ಜಿಲ್ಲೆ ಹುಣಸೂರಿನಲ್ಲಿ ನಡೆಯುವ ರಾಜ್ಯಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾಗಿರುತ್ತಾರೆ. ಮತ್ತು ಪ್ರೌಢಶಾಲಾ ಬಾಲಕರಲ್ಲಿ ಚರಣ್ (10ನೇ ತರಗತಿ), ವಿನಾಯಕ (10ನೇ ತರಗತಿ) ಇವರು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಹಾಗೂ ಪ್ರಾಥಮಿಕ ವಿಭಾಗದ ಬಾಲಕರು ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಪ್ರಾಥಮಿಕ ವಿಭಾಗದ ಬಾಲಕರಲ್ಲಿ ಮಿಥುನ್ ವಿ.ಕೆ (8ನೇ ತರಗತಿ), ವಿನೀತ್ (8ನೇ ತರಗತಿ) ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ ಎಂದು ಮುಖ್ಯಗುರು ಆಶಾಬೆಳ್ಳಾರೆ ತಿಳಿಸಿರುತ್ತಾರೆ.

Throwbal

Highslide for Wordpress Plugin