ತಂತ್ರಜ್ಞಾನ ಆಧಾರಿತ ಶಿಕ್ಷಣದ ಉದ್ಘಾಟನೆ

ಖ್ಯಾತ ಸೌರವಿಜ್ಞಾನಿ ಡಾ. ಹರೀಶ್ ಹಂದೆಯವರಿಂದ ಸ್ಥಾಪನೆಯಾದ ಸೆಲ್ಕೋ ಸೋಲಾರ್ ಲೈಟ್ ಪ್ರೈ.ಲಿಮಿಟೆಡ್ ಕಳೆದ 25 ವರ್ಷಗಳಿಂದ ಗ್ರಾಮೀಣ ಭಾಗಗಳನ್ನು ಕೇಂದ್ರವಾಗಿಟ್ಟುಕೊಂಡು ಅಲ್ಲಿನ ಜನರ ಜೀವನಮಟ್ಟವನ್ನು ಉತ್ತಮವಾಗಿಸಲು ವಿವಿಧ ಕಾರ್ಯಕ್ಷೇತ್ರಗಳಲ್ಲಿ ನೆರವಾಗುವಂತಹ ಸೋಲಾರ್‌ಚಾಲಿತ ಯಂತ್ರಗಳನ್ನು ಒದಗಿಸುತ್ತ ಬಂದಿದೆ. ’ಇಶಾಲಾ’ ಎಂಬ ಯೋಜನೆಯಲ್ಲಿ ಗ್ರಾಮೀಣ ಪ್ರದೇಶದ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಪ್ರಯತ್ನವನ್ನು ಮಾಡುತ್ತಿದೆ.

2000 ಕ್ಕಿಂತಲೂ ಅಧಿಕ ಶಾಲೆಗಳಲ್ಲಿ ಸೆಲ್ಕೋ ತಂತ್ರಜ್ಞಾನ ಆಧಾರಿತ ಶಿಕ್ಷಣ ನೀಡುವ ಸಾಧನಗಳನ್ನು ಅಳವಡಿಸುವ ಮೂಲಕ ಸಾಮಾಜಿಕ ಬದ್ಧತೆಯನ್ನು ಮೆರೆದಿದೆ. ಇದೇ ನಿಟ್ಟಿನಲ್ಲಿ ಸೆಲ್ಕೋ ಸಂಸ್ಥೆಯು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿಯೂ ಕೂಡ ಸೋಲಾರ್‌ ಆಧಾರಿತ ’ಸ್ಮಾರ್ಟ್‌ಕ್ಲಾಸ್’ ವ್ಯವಸ್ಥೆಯನ್ನು ಅಳವಡಿಸಿದ್ದು ಅದರ ಉದ್ಘಾಟನೆಯು ಶಾಲಾ ಸಭಾಂಗಣದಲ್ಲಿ ನೆರವೇರಿತು.

Solor System inauguration (3)

Solor System inauguration (1)

Solor System inauguration (2)

ಮುಖ್ಯ ಅತಿಥಿಗಳಾಗಿ ಆಗಮಿಸಿದ ಸೆಲ್ಕೊದ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಶ್ರೀಯುತ ಗುರುಪ್ರಕಾಶ್ ಶೆಟ್ಟಿಯವರು ಮಾತನಾಡಿ ಗ್ರಾಮೀಣ ಭಾಗದ ಜನರಿಗೆ ಎಲ್ಲಾ ಸೌಲಭ್ಯಗಳು ಸಿಗುವಂತಾಗಬೇಕು ಎಂಬುದು ನಮ್ಮ ಉದ್ದೇಶ. ದೃಶ್ಯ – ಶ್ರವ್ಯ ಮಾಧ್ಯಮದ ಮೂಲಕದ ಕಲಿಕೆ ಹೆಚ್ಚು ಪರಿಣಾಮಕಾರಿ. ದೊರಕಿರುವ ಸೌಲಭ್ಯಗಳನ್ನು ಸಂಪೂರ್ಣವಾಗಿ ಬಳಕೆ ಮಾಡಿ, ಹೊಸ ಆವಿಷ್ಕಾರಗಳು ವಿದ್ಯಾರ್ಥಿಗಳಾದ ತಮ್ಮಿಂದ ಮೂಡಿ ಬರಲಿ ಎಂದು ಹಾರೈಸುತ್ತಾ, ಇಂಧನ ಬಳಕೆಯ ಪರಿಮಿತಿಯನ್ನು ತಿಳಿಸಿದರು.

ಸಭಾಧ್ಯಕ್ಷತೆ ವಹಿಸುರುವ ಆಡಳಿತ ಮಂಡಳಿಯ ಅಧ್ಯಕ್ಷರೂ ಆಗಿರುವ ಶ್ರೀಯುತ ಅಚ್ಯುತ ನಾಯಕರು ಸಾಂದರ್ಭಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಸೆಲ್ಕೊದ ಹಿರಿಯ ಪ್ರಬಂಧಕರಾದ ಶ್ರೀ ಪ್ರಸಾದ್ ಬಿ, ಸುಧಾಕರ್ ಆಳ್ವ, ಸಂಜಿತ್‌ರೈ, ರಾಧಾಕೃಷ್ಣಗೌಡ ಆಡಳಿತ ಮಂಡಳಿಯ ಸಂಚಾಲಕರಾದ ರವಿನಾರಾಯಣ, ಸದಸ್ಯರಾದ ಶ್ರೀ ವಸಂತ ಸುವರ್ಣ, ಶೇಖರ್ ನಾರಾವಿ ಉಪಸ್ಥಿತರಿದ್ದರು. ಮುಖ್ಯಗುರು ಆಶಾಬೆಳ್ಳಾರೆ ಸ್ವಾಗತಿಸಿ, ಸಹಶಿಕ್ಷಕಿ ಗೀತಾಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin