ವಿದ್ಯಾಭಾರತಿ ಕಬಡ್ಡಿ ಪಂದ್ಯಾಟ – ರಾಜ್ಯಮಟ್ಟಕ್ಕೆ ಆಯ್ಕೆ

ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆ ಇದರ ಸಹಯೋಗದಲ್ಲಿ ಜ್ಞಾನದೀಪ ವಿದ್ಯಾಸಂಸ್ಥೆ ಎಲಿಮಲೆಯಲ್ಲಿ ನಡೆದ ವಿದ್ಯಾಭಾರತಿ ದಕ್ಷಿಣ ಕನ್ನಡ ಜಿಲ್ಲಾಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಬಾಲವರ್ಗದ ಬಾಲಕಿಯರು ಮತ್ತು ಕಿಶೋರವರ್ಗದ ಬಾಲಕಿಯರು ಪ್ರಥಮ ಸ್ಥಾನ ಹಾಗೂ ಕಿಶೋರವರ್ಗದ ಬಾಲಕರು ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಬಾಲವರ್ಗದ ಬಾಲಕರ ವಿಭಾಗದಲ್ಲಿ ಧನುಷ್ ರಾಜ್ಯಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ವಿಜೇತ ತಂಡಗಳೆರಡೂ ಮುಂಡಾಜೆಯಲ್ಲಿ ನಡೆಯುವ ಪ್ರಾಂತ (ರಾಜ್ಯ)ಮಟ್ಟ ಪ್ರತಿನಿಧಿಸಲಿದ್ದಾರೆ. ಇವರಿಗೆ ಶ್ರೀ ಮನೋಹರ್ ನುಳಿಯಾಲು ಮತ್ತು ಶಾಲಾ ದೈಹಿಕ ಶಿಕ್ಷಕರಾದ ದಾಮೋದರ್ ಮತ್ತು ಹರಿಣಾಕ್ಷಿ ತರಬೇತಿ ನೀಡಿರುತ್ತಾರೆ.

Kabaddi

Highslide for Wordpress Plugin