ಸ್ಪರ್ಧೆಗಳಲ್ಲಿ ಅನುಭವವೇ ಗೆಲುವು ಎನ್ನುವ ಭಾವನೆ ಬೆಳೆಯಬೇಕು -ರಾಧಾಕೃಷ್ಣ ಬೋರ್ಕರ್

ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಆಶ್ರಯದಲ್ಲಿ ಬಾಲವರ್ಗ, ಕಿಶೋರ ವರ್ಗ ಮತ್ತು ತರುಣ ವರ್ಗದ ಪ್ರಾಂತ ಮತ್ತು ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟವು ಅಧಿಕಾರಿಗಳ ಕ್ಲಬ್‌ ದರ್ಬೆಯಲ್ಲಿ ಉದ್ಘಾಟನೆಗೊಂಡಿತು.

Shuttle Badminton (4)

Shuttle Badminton (1)

Shuttle Badminton (2)

Shuttle Badminton (3)

ಮನಸ್ಸು ಇಚ್ಛೆಯ ತುತ್ತತುದಿಯನ್ನೇರಿದಾಗ ಸಾಫಲ್ಯತೆ ಸಾಧ್ಯ. ಸ್ಪರ್ಧೆಯ ಮಾನಸಿಕ ಸ್ಥಿತಿ ಗೆಲುವೇ ಆಗಿರಬೇಕು. ಸೋತಾಗ ದುಡುಕುತನ ಬೇಡ. ಸ್ಪರ್ಧೆಗಳಲ್ಲಿ ಅನುಭವವೇ ಗೆಲುವು ಎನ್ನುವ ಭಾವನೆ ಬೆಳೆಯಬೇಕು ಎಂದು ಉದ್ಘಾಟಕರ ನೆಲೆಯಲ್ಲಿ ಪುತ್ತೂರು ತಾಲೂಕು ಪಂಚಾಯತ್‌ ಅಧ್ಯಕ್ಷರಾದ ಶ್ರೀ ರಾಧಾಕೃಷ್ಣ ಬೋರ್ಕರ್ ಹೇಳಿದರು. ಸಭಾಧ್ಯಕ್ಷರಾದ ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಅಚ್ಯುತ್ ನಾಯಕ್‌ರವರು ಸಾಮಾನ್ಯ ವ್ಯಕ್ತಿಯು ಅಸಾಮಾನ್ಯ ವ್ಯಕ್ತಿ ಆಗಬಲ್ಲ.ಆತ್ಮವಿಶ್ವಾಸ ಹಾಗೂ ನಮ್ಮತನದಲ್ಲಿ ನಂಬಿಕೆಯಿರಲಿ ಎಂದು ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿದರು.

ಕ್ರೀಡಾಕೂಟದಲ್ಲಿ ಮಂಗಳೂರು, ಬೆಂಗಳೂರು, ಬೆಳಗಾವಿ, ಧಾರವಾಡ ಮುಂತಾದ ಕಡೆಗಳಿಂದ ತಂಡಗಳು ಆಗಮಿಸಿದ್ಧವು.

ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿಯ ಸಂಚಾಲಕರಾದ ಶ್ರೀ ರವಿನಾರಾಯಣ, ಸದಸ್ಯರಾದವಸಂತ ಸುವರ್ಣ, ಶ್ರೀ ರಮೇಶ್ಚಂದ್ರ, ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥಿಸಿ, ಶಾಲಾ ಮುಖ್ಯಗುರುಗಳಾದ ಶ್ರೀಮತಿ ಆಶಾ ಬೆಳ್ಳಾರೆ ಸ್ವಾಗತಿಸಿದರು. ಸಹಶಿಕ್ಷಕಿ ಶ್ರೀಮತಿ ಅನುಷಾ ಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin