ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲಾ ಘಟಕ ಮತ್ತು ವಿವೇಕಾನಂದ ವಿದ್ಯಾಸಂಸ್ಥೆ ವಿನೋಬ ನಗರ ಜಾಲ್ಸೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಮಕ್ಕಳು ಭಾಗವಹಿಸಿ ಪ್ರೌಢ ಶಾಲಾ ವಿಭಾಗದ ಬಾಲಕರು ಹಾಗೂ ಬಾಲಕಿಯರು ಸಮಗ್ರ ತಂಡ ಪ್ರಶಸ್ತಿ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಬಾಲಕರ ವಿಭಾಗದಲ್ಲಿ ಪುನೀತ್ ರಾಜ್, ಲಿಖಿತ್, ಕೌಶಿಕ್, ರಕ್ಷಿತ್ ಮತ್ತು ಬಾಲಕಿಯರ ವಿಭಾಗದಲ್ಲಿ ಹೇಮಶ್ರೀ, ಸುಚಿತಾ, ಸೌಜನ್ಯ, ರಶ್ಮಿ, ದೇವಿಕಾ ಮತ್ತು ಬಾಲಕರ ವೈಯಕ್ತಿಕ ವಿಭಾಗದಲ್ಲಿ ಲಿಖಿತ್ ಪ್ರಥಮ ಸ್ಥಾನ, ಕೌಶಿಕ್ ತೃತೀಯ ಸ್ಥಾನ ಪಡೆದಿರುತ್ತಾರೆ. ಪ್ರೌಢಶಾಲಾ ಬಾಲಕರ ರಿದಮಿಕ್ ಯೋಗದಲ್ಲಿ ಕೌಶಿಕ್ ದ್ವಿತೀಯ ಸ್ಥಾನ, ಅಥ್ಲೆಟಿಕ್ ಯೋಗದಲ್ಲಿ ಸುಚಿತಾ ದ್ವಿತೀಯ ಸ್ಥಾನ ಪಡೆದಿರುತ್ತಾಳೆ.

