ನಾವೆಲ್ಲರೂ ಒಂದು, ನಾವೆಲ್ಲರೂ ಭಾರತೀಯರು ಎಂದು ಅರಿವಾದಾಗ ಸಮರ್ಪಣಾ ಭಾವ ಜಾಗೃತವಾಗುತ್ತದೆ. ಇದರಿಂದಲೇ ರಾಷ್ಟ್ರದ ಉನ್ನತಿ ಸಾಧ್ಯ. ಭಾರತದೇಶವು ಪ್ರತಿಯೊಂದು ಮನೆಯ ಮಾತೆಯಿಂದ ಪ್ರಾರಂಭಿಸಿ ಹಲವಾರು ದೇಶಭಕ್ತರ ವೀರಯೋಧರ ತ್ಯಾಗ ಬಲಿದಾನಗಳಿಂದಲೇ ಇಂದು ಸ್ವತಂತ್ರ ಹಾಗೂ ಶ್ರೇಷ್ಠ ದೇಶವೆನಿಸಿಕೊಂಡಿರುವುದು. ಇಂತಹ ತ್ಯಾಗಗಳ ಬಗ್ಗೆ ತಿಳಿದುಕೊಳ್ಳುತ್ತಾ ಜೀವನ ಮೌಲ್ಯಗಳನ್ನು ತಮ್ಮಲ್ಲಿ ಅಳವಡಿಸಿಕೊಂಡಾಗ ನಮ್ಮ ರಾಷ್ಟ್ರ ಸರ್ವಾಂಗೀಣವಾಗಿ ಬೆಳೆಯುತ್ತದೆ ಎಂದು ವಿವೇಕಾನಂದ ವಿದ್ಯಾವರ್ಧಕ ಸಂಘದ ಪ್ರಾಥಮಿಕ ಮತ್ತು ಪ್ರೌಢ ವಿಭಾಗದ ಸಂಸ್ಕಾರ ಪರಿವೀಕ್ಷಣಾ ಪ್ರಮುಖರಾದ ಮೀನಾಕ್ಷಿ ಮಾತಾಜಿ ಇವರು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ನಡೆದ ಗುರುಪೂರ್ಣಿಮೆಯ ಮುಖ್ಯ ಅತಿಥಿ ನೆಲೆಯಲ್ಲಿ ಮಾತನಾಡಿದರು.


ವೇದಿಕೆಯಲ್ಲಿ ಪ್ರೌಢಶಾಲಾ ಮುಖ್ಯಗುರುಗಳಾದ ಆಶಾಬೆಳ್ಳಾರೆ, ಪ್ರಾಥಮಿಕ ಶಾಲಾ ಮುಖ್ಯಗುರುಗಳಾದ ನಳಿನಿ ವಾಗ್ಲೆ ಉಪಸ್ಥಿತರಿದ್ದರು. ಮಕ್ಕಳೆಲ್ಲರೂ ಭಗವತ್ ಧ್ವಜವನ್ನು ಗುರುವಿನ ಸ್ಥಾನದಲ್ಲಿರಿಸಿ ಪೂಜಿಸಿ ಧ್ವಜವಂದನೆ, ಪುಷ್ಫಾರ್ಚನೆಗೈದರು. ವಿದ್ಯಾರ್ಥಿನಿ ಶ್ರೇಯ ಪ್ರಾರ್ಥಿಸಿ, ಶ್ರೀಮತಿ ಗೀತಾ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.