ಶಾಲಾ ಮಾತೃಭಾರತಿಯ ಮೂಲಕ ವೇದಿಕೆಯಲ್ಲಿ ನಿಂತು ಮಾತನಾಡುವ ಧೈರ್ಯ ಬಂದಿದೆ. ಶಾಲೆಯ ಎಲ್ಲಾ ಚಟುವಟಿಕೆಗಳಲ್ಲಿ ಪೋಷಕರನ್ನು ಜೋಡಿಸುತ್ತಾ ನಮ್ಮಲ್ಲೂ ಸಂಸ್ಕಾರವನ್ನು ತರುವ ಇಲ್ಲಿನ ರೀತಿಯು ನಮಗೆಲ್ಲಾ ಪ್ರೇರಣೆಯಾಗಿದೆ ಎಂದು ನುಡಿದವರು ಶಾಲಾ ಮಾತೃಭಾರತಿಯ ಕಳೆದ ಸಾಲಿನ ಅಧ್ಯಕ್ಷೆಯಾದ ಶ್ರೀಮತಿ ರೇಖಾ ಇವರು ವಿವೇಕಾನಂದ ಕನ್ನಡ ಶಾಲೆಯ ಶಿಕ್ಷಕ-ರಕ್ಷಕ ಸಂಘ, ಮಾತೃಭಾರತಿಯ ಪದಗ್ರಹಣ ಸಮಾರಂಭದಲ್ಲಿ ಉಪಸ್ಥಿತರಿದ್ದ ಶ್ರೀಯುತ ಹರಿಕೃಷ್ಣ ಹಾಗೂ ರೇಖಾ ಇವರು ಈ ಸಾಲಿನ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಕೃಷ್ಣ ಭಟ್ ಹಾಗೂ ಮಾತೃಭಾರತಿಯ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಉಷಾ ಮಹೇಶ್ ಇವರಿಗೆ ಹೂ ನೀಡಿ ಅಭಿನಂದನೆ ಸಲ್ಲಿಸಿದರು.

ಅನಂತರ ಮಾತನಾಡಿದ ಶಾಲಾ ಅಧ್ಯಕ್ಷರಾದ ಶ್ರೀಯುತ ಅಚ್ಯುತ ನಾಯಕ್ ಇವರು ಮಗು-ಮನೆ-ಶಾಲೆ ಏಕಮಾತ್ರದಲ್ಲಿ ಕೆಲಸ ಮಾಡಿ ಗುಣಾತ್ಮಕತೆಯನ್ನು ಹೆಚ್ಚು ಮಾಡಲು ನಮ್ಮೀ ಸಂಂಘಗಳ ಕಾರ್ಯ ಶ್ಲಾಘನೀಯ ಎಂದರು. ಶಾಲಾ ಮುಖ್ಯಗುರುಗಳು ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶಿಕ್ಷಕ-ರಕ್ಷಕ ಸಂಘದ ಉಪಾಧ್ಯಕ್ಷರಾಗಿ ಜೆ.ಸಿ.ಐಯ ಪ್ರಾಂತ ವಲಯ ಉಪಾಧ್ಯಕ್ಷರಾದ ಶ್ರೀಯುತ ದಾಮೋದರ ಪಾಟಾಳಿ ಹಾಗೂ ಮಾತೃಭಾರತಿಯ ಉಪಾಧ್ಯಕ್ಷರಾಗಿ ಶ್ರೀಮತಿ ನವೀನಾಕ್ಷಿ ಹಾಗೂ ಕಾರ್ಯದರ್ಶಿಗಳಾಗಿ ಶ್ರೀಮತಿ ಲಲಿತಾ ಆಯ್ಕೆಯಾದರು. ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು. ಸಹಶಿಕ್ಷಕಿ ಶ್ರೀಮತಿ ಶ್ವೇತಾ ಇವರ ಪ್ರಾರ್ಥನೆ ದೀಪಪ್ರಜ್ವಲನೆಯೊಂದಿಗೆ ಆರಂಭವಾದ ಕಾರ್ಯಕ್ರಮವನ್ನು ಶ್ರೀಮತಿ ಗೀತಾ ನಿರೂಪಣೆಗೈದರು.