ಹಿಂದಿ ಪರೀಕ್ಷೆ -ಅನ್ವಿತ್ ರೈಗೆ ರಾಜ್ಯದಲ್ಲಿ ದ್ವಿತೀಯ ರ್‍ಯಾಂಕ್

Anwith-Raiಫೆಬ್ರವರಿ ತಿಂಗಳಲ್ಲಿ ನಡೆದ ’ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ’ದ ’ಹಿಂದಿ ಪ್ರಾಥಮಿಕ’ ಪರೀಕ್ಷೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಒಟ್ಟು ೨೨ ವಿದ್ಯಾರ್ಥಿಗಳು ಹಾಜರಾಗಿದ್ದು ಶೇ. 100 ಫಲಿತಾಂಶ ಬಂದಿರುತ್ತದೆ. ಇದರಲ್ಲಿ 9ನೇ ತರಗತಿಯ ವಿದ್ಯಾರ್ಥಿ ಅನ್ವಿತ್ ರೈ ಇವರು ರಾಜ್ಯಮಟ್ಟದಲ್ಲಿ ೨ನೇ ರ್‍ಯಾಂಕ್‌ನ್ನು ಪಡೆದಿರುತ್ತಾರೆ. ಇವರಿಗೆ ’ದಕ್ಷಿಣ ಭಾರ್‌ತ ಹಿಂದಿ ಪ್ರಚಾರ ಸಭಾ’ದ ಪ್ರಚಾರಕಿ ಶ್ರೀಮತಿ ಪ್ರಫುಲ್ಲಾ ಹಾಗೂ ಹಿಂದಿ ಶಿಕ್ಷಕಿ ದಾಕ್ಷಾಯಿಣಿ ಮಾರ್ಗದರ್ಶನ ನೀಡಿರುತ್ತಾರೆ. ಇವರು ಶಶಿಧರ್ ರೈ ಮತ್ತು ಶ್ರೀಮತಿ ಭಾರತಿ ದಂಪತಿಗಳ ಪುತ್ರ.

Highslide for Wordpress Plugin