ಬಯಸಿದ್ದು ಸಿಗದಿದ್ದಲ್ಲಿ ಬಂದದ್ದನ್ನು ಸ್ವೀಕರಿಸಿ ಸಂತೋಷವಾಗಿರಬೇಕು. ಸಣ್ಣ-ಸಣ್ಣ ವಿಷಯಗಳಲ್ಲೂ  ಖುಷಿ ಕಾಣುವಂತಾಗಲಿ- ಡಾ| ಸುಧಾ ರಾವ್

ಬದುಕಿನಲ್ಲಿ ನಾವು ಎಣಿಸದಂತೆ ನಡೆಯದಿರುವ ಅದೆಷ್ಟೋ ಸಂದರ್ಭಗಳಿವೆ. ಅದಕ್ಕಾಗಿ ಕೊರಗುತ್ತಾ ಕೂರುವುದಲ್ಲ. ಬದಲಾಗಿ ಬಂದಂತಹ ವಿಷಯಗಳಲ್ಲಿ ಖುಷಿ ಕಾಣುವಂತಾಗಬೇಕು ಎಂದು ಡಾ| ಸುಧಾರಾವ್ ಹತ್ತನೇ ತರಗತಿ ಮಕ್ಕಳಿಗೆ ಹೇಳಿದರು. ಇವರು ವಿವೇಕಾನಂದ ಕನ್ನಡ ಶಾಲೆಯ ಹತ್ತನೇ ತರಗತಿಯ ಮಕ್ಕಳಿಗೆ ಮೇಲಿನ ನುಡಿಗಳನ್ನಾಡಿದರು.

10th Abhinandane (4)

10th Abhinandane (5)

10th Abhinandane (6)

10th Abhinandane (1)

10th Abhinandane (2)

10th Abhinandane (3)

ಈ ಸಂದರ್ಭ ಶಾಲಾ ವಿದ್ಯಾನಿಧಿಗೆ 2 ಮಕ್ಕಳ ಪ್ರವೇಶ ಶುಲ್ಕ ನೀಡಿದ ಅನೀಶ್ ಬಡೆಕ್ಕಿಲ ಹಾಗೂ ಪೋಷಕರೂ ಆಟೋ ಚಾಲಕರೂ ಆದ ಮೋಹನ್ ಇವರನ್ನು ಅಭಿನಂದಿಸಲಾಯಿತು. ವಿದ್ಯಾರ್ಥಿ ಬದುಕಿನ ಕಾಲೇಜು ಹಂತದಲ್ಲಿರುವ ಮಕ್ಕಳಲ್ಲಿ ಸಾಮಾಜಿಕ ಸನ್ಮಂಗಳದ ದೃಷ್ಟಿಕೋನವನ್ನು ಬೆಳೆಸುವ ನಿಟ್ಟಿನಲ್ಲಿ ಮಕ್ಕಳು ಮತ್ತು ಪೋಷಕರಿಂದ ’ಮಳೆಗಾಗಿ ಪ್ರಾರ್ಥನೆ’ ನಡೆಯಿತು.

ಅಭ್ಯಾಗತರಾಗಿ ಆಗಮಿಸಿದ ಮಣಿಕಂಠ ಗ್ಯಾಸ್ ಏಜೆನ್ಸಿಯ ಮಾಲಿಕರಾದ ಅರುಣ್ ಕುಮಾರ್ ರೈ 2018-19 ನೇ ಸಾಲಿನ 134 ಮಕ್ಕಳಿಗೂ ಶಾಲಾ ದಿನಗಳ ಸವಿನೆನಪಿಗಾಗಿ ಅಭಿನಂದನಾ ಪತ್ರ ನೀಡಿ ಅಭಿನಂದಿಸಿದರು. ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರಾದ ರವಿ ಮುಂಗ್ಲಿಮನೆ, ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಅಚ್ಯುತ ನಾಯಕ್, ಸದಸ್ಯರು ಉಪಸ್ಥಿತರಿದ್ದರು. ಶಾಲಾ ಮುಖ್ಯಗುರುಗಳಾದ ಆಶಾ ಬೆಳ್ಳಾರೆ ಪ್ರಾಸ್ತಾವಿಕ ಮಾತುಗಳನ್ನಾಡಿದರು.

Highslide for Wordpress Plugin