ವಿದ್ಯಾದದಾತಿ ವಿನಯಂ -ಶ್ರೀ ಕೃಷ್ಣಪ್ರಸಾದ್

ಪಡೆದ ಶಿಕ್ಷಣ ಮನೆ, ಶಾಲೆ ಸಮಾಜವನ್ನು ಬೆಳಗುವಂತಾಗಬೇಕು. ಪ್ರಾಮಾಣಿಕತೆ ಇರಬೇಕು. ವಿದ್ಯೆಯಿಂದ ಸದ್ಗುಣ ಸಂಪನ್ನ, ಶೀಲವಂತರಾಗಬೇಕು. ವಿದ್ಯೆಯು ಸಂಸ್ಕಾರ, ವಿವೇಚನೆ ನೀಡುತ್ತದೆ ಅದೇ ರೀತಿ ಉತ್ತಮವಾದದ್ದನ್ನು ಆರಿಸಿಕೊಳ್ಳುವ, ಕೆಟ್ಟದನ್ನು ತ್ಯಜಿಸುವ ಗುಣವನ್ನು ನೀಡುತ್ತದೆ ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ 10 ನೇ ತರಗತಿ ವಿದ್ಯಾರ್ಥಿಗಳ ’ದೀಕ್ಷಾಂತ’ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣಪ್ರಸಾದ್ ನುಡಿದರು. ಇವರು ಶ್ರೀರಾಮ ಪದವಿ ಕಾಲೇಜಿನ ಪ್ರಾಂಶುಪಾಲರಾಗಿದ್ದು ಈ ಕಾರ್ಯಕ್ರಮದ ಮುಖ್ಯ ಅತಿಥಿ ನೆಲೆಯಲ್ಲಿ ಈ ಮಾತುಗಳನ್ನಾಡಿದರು.

Deekshanta (2)

Deekshanta (3)

Deekshanta (4)

Deekshanta (1)

ಎಲ್ಲಾ ವಿದ್ಯಾರ್ಥಿಗಳು ತಮ್ಮ ಪೋಷಕರ ಪಾದ ಪೂಜೆಯನ್ನು ಮಾತೃವಂದನಾದ ಮೂಲಕ ಮಾಡಿ ಅಖಂಡ ಭಾರತಕ್ಕೆ ಹಣತೆಯನ್ನು ಬೆಳಗಿಸಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಅಚ್ಯುತ್ ನಾಯಕ್ ಅಧ್ಯಕ್ಷೀಯ ನೆಲೆಯಲ್ಲಿ ಮಾತನಾಡಿ ಮಕ್ಕಳ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದರು.

ಶಾಲಾ ಮುಖ್ಯ ಗುರು ಆಶಾಬೆಳ್ಳಾರೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ವೇದಿಕೆಯಲ್ಲಿ ಶಾಲಾ ಆಡಳಿತ ಮಂಡಳಿ ಕೋಶಾಧಿಕಾರಿ ವಸಂತ ಸುವರ್ಣ ಉಪಸ್ಥಿತರಿದ್ದರು. ಶ್ರೀಮತಿ ಅನುಷಾ ಕಾರ್ಯಕ್ರಮ ನಿರೂಪಿಸಿದರು.

Highslide for Wordpress Plugin