ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ ಇಲ್ಲಿ ದಿನಾಂಕ ೧೧.೦೮.೨೦೧೨ ರಂದು ವಿದ್ಯಾಭಾರತಿ ಕರ್ನಾಟಕ ವತಿಯಿಂದ ಜಿಲ್ಲಾ ಮಟ್ಟದ ತ್ರೋಬಾಲ್ ಮತ್ತು ವಾಲಿಬಾಲ್ ಪಂದ್ಯಾಟ ನಡೆಯಿತು. ಈ ಪಂದ್ಯಾಟದ ಉದ್ಫಾಟಕರಾಗಿ ಶ್ರೀ ಮೃತ್ಯುಂಜೇಶ್ವರ ದೇವಸ್ಥಾನ ಮುಂಡೂರು ಇಲ್ಲಿಯ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ಶ್ರೀಯುತ ಜಯಂತ ನಡುಬೈಲು ಇವರು ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಶ್ರೀ ಹರೀಶ್ ಪುತ್ತೂರಾಯ ಹಾಗೂ ಅಧ್ಯಕ್ಷರಾಗಿ ಶ್ರೀ ಬಂಗಾರಡ್ಕ ವಿಶ್ವೇಶ್ವರ ಭಟ್ ಉಪಸ್ಥಿತರಿದ್ದು ಕ್ರೀಡಾಳುಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಮುಖ್ಯಗುರುಗಳಾದ ಶ್ರೀಮತಿ ಆಶಾ ಬೆಳ್ಳಾರೆ ಮತ್ತು ಶ್ರೀ ಸತೀಶ್ ರೈ ಹಾಗೂ ಶಿಕ್ಷಕ- ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ ಮೋನಪ್ಪ ಪೂಜಾರಿ ಉಪಸ್ಥಿತರಿದ್ದರು.
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬಿ.ಎಡ್ ಕಾಲೇಜಿನ ಪ್ರಶಿಕ್ಷಕಿ ಶ್ರೀಮತಿ ಶೋಭಿತಾ ಸತೀಶ್ ರವರು ಮಾತನಾಡಿ ಬಹುಮಾನಗಳಿಸಿದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವೇದಿಕೆಯಲ್ಲಿ ಡಿ.ಎಡ್ ಕಾಲೇಜಿನ ಪ್ರಾಂಶುಪಾಲೆ ಶ್ರೀಮತಿ ಅನುರಾಧ ರವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿಕ್ಷಕ ಶ್ರೀ ಚಂದ್ರಶೇಖರ ವರು ನಿರೂಪಿಸಿದರು.