ಸರಕಾರಿ ಉನ್ನತೀಕರಿಸಿದ ಹಿರಿಯಪ್ರಾಥಮಿಕ ಶಾಲೆ, ಹಾರಾಡಿ ಇಲ್ಲಿ ನಡೆದ ತಾಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯ ಯಕ್ಷಗಾನ ವೈಯಕ್ತಿಕ ಸ್ಪರ್ಧೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಯಕ್ಷಚಿಣ್ಣರು ಜಿಲ್ಲಾಮಟ್ಟಕ್ಕೆ ಆಯ್ಜೆಯಾಗಿದ್ದಾರೆ. ಕಿರಿಯ ವಿಭಾಗದಲ್ಲಿ ಧನುಷ್(3ನೇ ತರಗತಿ), ಹಿರಿಯ ವಿಭಾಗದಲ್ಲಿ ಪರೀಕ್ಷಿತ್ (7ನೇ ತರಗತಿ) ಮತ್ತು ಪ್ರೌಢ ವಿಭಾಗದಲ್ಲಿ ಕು.ಶ್ರೇಯಾ ಪ್ರಥಮ ಸ್ಥಾನ ಪಡೆದು ಸುರತ್ಕಲ್ನಲ್ಲಿ ನಡೆಯುವ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದು, ಇವರೆಲ್ಲರೂ ನಾಟ್ಯಗುರುಗಳಾದ ಶ್ರೀ ಬಾಲಕೃಷ್ಣ ಪೂಜಾರಿ ಉಡ್ಡಂಗಳ ಇವರಿಂದ ತರಬೇತಿ ಪಡೆಯುತ್ತಿದ್ದು, ಭಾಗವತಿಕೆಯಲ್ಲಿ ಶ್ರೀ ಸತೀಶ್ ಇರ್ದೆ, ಚೆಂಡೆಯಲ್ಲಿ ಶ್ರೀ ರಾಜೇಂದ್ರಪ್ರಸಾದ್ ಪುಂಡಿಕಾ, ಮದ್ದಳೆಯಲ್ಲಿ ಶ್ರೀ ಸದಾನಂದ ಮಯ್ಯಾಳರವರು ಹಿಮ್ಮೇಳದಲ್ಲಿ ಸಹಕಾರ ನೀಡುತ್ತಿದ್ದಾರೆ. ಸಂಯೋಜನೆಯನ್ನು ಶಿಕ್ಷಕ, ಯಕ್ಷಗಾನ ಕಲಾವಿದ ಶ್ರೀ ಚಂದ್ರಶೇಖರ ಸುಳ್ಯಪದವು ಮಾಡುತ್ತಿದ್ದಾರೆ.
