ವಿಶೇಷ ಚಿತ್ರಕಲಾ ತರಗತಿಗೆ ಚಾಲನೆ

ದಿನಾಂಕ 14-7-2018 ರಂದು ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ, ವಿವೇಕನಗರ, ತೆಂಕಿಲ ಪುತ್ತೂರು ಇಲ್ಲಿ ಶೈಕ್ಷಣಿಕ ವರ್ಷದಿಂದ ವಿಶೇಷ ಚಿತ್ರಕಲಾ ತರಗತಿ ವಿದ್ಯುಕ್ತವಾಗಿ ಚಾಲನೆಗೊಂಡಿತು. ಮಾಜಿ ಸೈನಿಕ ಹಾಗೂ ಎಸ್.ಬಿ.ಐ. ಉದ್ಯೋಗಿ ಶ್ರೀ ರಾಮಕೃಷ್ಣ ಇವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭ ಹಾರೈಸಿದರು.

Drawing class (2)

Drawing class (1)

ಶಾಲಾ ಮುಖ್ಯೋಪಾಧ್ಯಾಯರು ಸತೀಶ್ ಕುಮಾರ್ ರೈ ಪ್ರಾಸ್ತಾವಿಕ ನುಡಿಗಳೊಂದಿಗೆ ಶುಭ ಕೋರಿದರು. ಶಾಲಾ ಆಡಳಿತ ಮಂಡಳಿ ಅಧ್ಯಕ್ಷರಾದ ಶ್ರೀ ವೆಂಕಟೇಶ್ವರ ಅಮೈ ರವರು ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಕ್ಕಳಿಗೆ ಶುಭ ಕೋರಿದರು. ಚಿತ್ರಕಲಾ ಶಿಕ್ಷಕ ಮಹೇಶ್ ಹಿರೇಮಣಿ ವಂದಿಸಿ, ಚಿತ್ರಕಲಾ ಶಿಕ್ಷಕಿ ಶ್ರೀಮತಿ ರಶ್ಮಿ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಪೋಷಕರಾದ ಶ್ರೀ ನವೀನ್ ಕುಮಾರ್, ವಿವೇಕಾನಂದ ವಿದ್ಯಾವರ್ಧಕ ಸಂಘದ ವಿಶೇಷ ಅಧಿಕಾರಿ ಶ್ರೀ ವೆಂಕಟೇಶ್, ಪೋಷಕ ವೃಂದ, ವಿದ್ಯಾರ್ಥಿಗಳು, ಹಾಗೂ ಚಿತ್ರಕಲಾ ಶಿಕ್ಷಕರಾದ ಟೀಲಾಕ್ಷ ಮತ್ತು ಚೇತನ್ ಕುಮಾರ್ ಉಪಸ್ಥಿತರಿದ್ದರು.

Highslide for Wordpress Plugin