ಶ್ರದ್ದಾಂಜಲಿ ಸಭೆ

ಪುತ್ತೂರಿನ ಚಿನ್ನದ ಉದ್ಯಮಿ, ಹಿರಿಯ ಚೇತನ ಸ್ನೇಹಜೀವಿಯಾಗಿದ್ದ ಶ್ರೀ ಜಿ.ಎಲ್ ಆಚಾರ್ಯ ಇವರು ಸ್ವರ್ಗಸ್ಥರಾದ ಸಂದರ್ಭ ವಿವೇಕಾನಂದ ಕನ್ನಡ ಶಾಲೆಯಲ್ಲಿ ಆಡಳಿತ ಮಂಡಳಿ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಶ್ರೀಯುತರ ಆತ್ಮಕ್ಕೆ ಶಾಂತಿಕೋರಿ ಶ್ರದ್ದಾಂಜಲಿ ಸಭೆ ನಡೆಯಿತು. ಶಾಲಾ ಆಡಳಿತ ಮಂಡಳಿ, ಶಿಕ್ಷಕರು ಮತ್ತು ವಿದ್ಯಾರ್ಥಿ ನಾಯಕರು ಶ್ರೀಯುತರ ಭಾವಚಿತ್ರಕ್ಕೆ ಪುಷ್ಫಾಂಜಲಿ ಅರ್ಪಿಸಿದರು. ಆಡಳಿತ ಮಂಡಳಿ ಆಧ್ಯಕ್ಷರಾದ ಶ್ರೀಯುತ ಅಚ್ಯುತ ನಾಯಕ್ ಇವರು ಶ್ರೀ ಜಿ.ಎಲ್ ಆಚಾರ್ಯರ ಸುಮಾರು 20 ವರ್ಷಗಳ ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾಗಿ ಶಿಕ್ಷಣ ಸಂಸ್ಥೆಗಳ ಅಭಿವೃದ್ಧಿಗೆ ಸಲ್ಲಿಸಿದ ಸೇವೆಯನ್ನು ಸ್ಮರಿಸಿಕೊಂಡರು.

GL (1)

GL (2)

Highslide for Wordpress Plugin