ವಿಶ್ವಯೋಗ ದಿನಾಚರಣೆಯ ಹಿನ್ನೆಲೆಯಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ 5 ರಿಂದ 10 ನೇ ತರಗತಿಯ ಮಕ್ಕಳಿಗೆ ಆಸನ, ಧ್ಯಾನ, ಪ್ರಾಣಾಯಾಮ, ಸೂರ್ಯನಮಸ್ಕಾರಗಳನ್ನು ಅಭ್ಯಾಸ ಮಾಡಿಸಲಾಯಿತು. ಅನಂತರ ನಡೆದ ಸಭಾಕಾರ್ಯಕ್ರಮದಲ್ಲಿ ಸಮಾರೋಪ ಮಾತಿಗಾಗಿ ಆಗಮಿಸಿದ ಸುಳ್ಯದ ಯೋಗ ಮತ್ತು ನ್ಯಾಚುರೋಪತಿ ವೈದ್ಯರಾದ ಡಾ| ಶಶಿಧರ್ ಹಾಸನಡ್ಕ ಮಾತನಾಡಿ ಮನಸ್ಸಿನ ಸಮತೋಲನವನ್ನು ಯೋಗ ಕಾಪಾಡುತ್ತದೆ. ಮಾನಸಿಕ, ಬೌದ್ಧಿಕ, ಶಾರೀರಕ ಬೆಳವಣಿಗೆಗೆ ಯೋಗದ ಕೊಡುಗೆ ಅಪಾರವಾದುದು. ನಮ್ಮೊಳಗಿರುವ ಋಣಾತ್ಮಕತೆಯನ್ನು ತೊಡೆದು ಹಾಕಿ ಜ್ಞಾನವನ್ನು ತುಂಬಿಸಿಕೊಳ್ಳುವುದಕ್ಕೆ ಅಷ್ಟಾಂಗ ಯೋಗವು ಮಾಧ್ಯಮವಾಗುತ್ತದೆ ಎಂದರು.




ವೇದಿಕೆಯಲ್ಲಿ ಶಾಲಾ ಹಿರಿಯ ವಿದ್ಯಾರ್ಥಿನಿ ಪ್ರಸ್ತುತ ಉಜಿರೆಯಲ್ಲಿ ಯೋಗ ಮತ್ತು ಪ್ರಕೃತಿ ಚಿಕಿತ್ಸೆಯಲ್ಲಿ ವೈದ್ಯಕೀಯ ಅಧ್ಯಯನ ನಡೆಸುತ್ತಿರುವ ಕು. ಪ್ರಜ್ಞಾ ಪಿ.ಆರ್ ಮತ್ತು ಪ್ರಾಥಮಿಕ ಶಾಲಾ ಮುಖ್ಯಗುರು ಶ್ರೀಮತಿ ನಳಿನಿ ವಾಗ್ಲೆ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶ್ರೀಮತಿ ವೀಣಾಸರಸ್ವತಿ ಮಾತಾಜಿ ನಿರೂಪಿಸಿ, ಶಿಕ್ಷಕರಾದ ಶ್ರೀ ಗಣೇಶ್, ಶ್ರೀ ರಂಗಪ್ಪ ಸಹಕರಿಸಿದರು.