ಜೀವನದಲ್ಲಿ ಪರಿಶ್ರಮ ಪಟ್ಟಾಗ ಯಶಸ್ಸು ಖಂಡಿತವಾಗಿಯೂ ಲಭಿಸುವುದು ಕಲಿಕೆಯ ಜೊತೆ ಕ್ರೀಡೆಯಲ್ಲಿಯೂ ಸಾಧನೆ ಮಾಡಿದಾಗ ಹೆಚ್ಚಿನ ಅವಕಾಶಗಳು ತಾನಾಗಿಯೇ ಹುಡುಕಿಕೊಂಡು ಬರುತ್ತವೆ ಎಂದು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆ, ವಿವೇಕನಗರಾ, ತೆಂಕಿಲ ಇಲ್ಲಿನ ವಾರ್ಷಿಕ ಕ್ರೀಡಾಕೂಟದಲ್ಲಿ ಧ್ವಜಾರೋಹಣಗೈದ, ಪುತ್ತೂರು ನಗರ ಠಾಣೆಯ ಮಹಿಳಾ ಪೋಲಿಸ್ ಉಪನಿರೀಕ್ಷಕರಾದ ಶ್ರೀಮತಿ ಓಮನ ಎನ್.ಕೆ ರವರು ವಿದ್ಯಾರ್ಥಿಗಳಿಗೆ ಸ್ಪೂರ್ತಿದಾಯಕ ಮಾತುಗಳನ್ನಾಡಿದರು.





ಕ್ರೀಡಾಕೂಟವನ್ನು ಉದ್ಫಾಟಿಸಿದ ವಿದ್ಯಾಭಾರತಿ ಕರ್ನಾಟಕ ಇದರ ರಾಜ್ಯ – ಕ್ರೀಡಾ ಪ್ರಮುಖರಾದ ಶ್ರೀ ಆನಂದ ಶೆಟ್ಟಿ ಇವರು ಮಾತನಾಡಿ ಕ್ರೀಡಾ ಸಾಧನೆಗೆ ನಿರಂತರ ಪ್ರಯತ್ನ ತಾಳ್ಮೆ-ಶಿಸ್ತು-ಸಂಯಮ-ಆತ್ಮ ವಿಶ್ವಾಸ ಅತ್ಯಗತ್ಯ ಎಂದರು.
ಸಮಯವನ್ನು ವ್ಯರ್ಥಮಾಡದೆ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಳ್ಳುವುದರಿಂದ ವಿದ್ಯಾರ್ಥಿಗಳು ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬಹುದು ಎಂದು ಗೌರವ ವಂದನೆ ಸ್ವೀಕರಿಸಿದ ಯುವ ಉದ್ಯಮಿ ಶ್ರೀ ಸಹಜ್ ರೈ ಬಳಜ್ಜ ಇವರು ನುಡಿದರು.
ಶಾಲಾ ಸಂಚಾಲಕರಾದ ಶ್ರೀ ವಿನೋದ್ ಕುಮಾರ್ ರೈ ಗುತ್ತು ಇವರು ಸಭಾಧ್ಯಕ್ಷತೆಯನ್ನು ವಹಿಸಿದ್ದರು.
ವೇದಿಕೆಯಲ್ಲಿ ಶಾಲಾ ಅಧ್ಯಕ್ಷರಾದ ಶ್ರೀ ಅಚ್ಯುತ ನಾಯಕ್, ಮುಖ್ಯಗುರುಗಳಾದ ಶ್ರೀಮತಿ ಆಶಾ ಮಾತಾಜಿ ಮತ್ತು ಶ್ರೀಮತಿ ನಳಿನಿ ನಳಿನಿ ಮಾತಜಿಯವರು ಉಪಸ್ಥಿತಾರಿದ್ದರು.
ಕ್ರೀಡಾಕೂಟದಲ್ಲಿ ಘೋಷ್‌ವಾದನಗಾಳೊಂದಿಗೆ ತರಗತಿವಾರು ಆಕರ್ಷಣೀಯ ಪಥಸಂಚಲನವು ಎಲ್ಲರ ಗಮನ ಸೆಳೆಯಿತು.
ಕ್ರೀಡೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳು ಕ್ರೀಡಾಜ್ಯೋತಿಯ ಮುಂದಾಳತ್ವವನ್ನು ವಹಿಸಿದ್ದರು. ಉದ್ಫಾಟಕರು ದೀಪಬೆಳಗಿಸಿ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಶಾಲಾ ನಾಯಕ ಹಾಗೂ ರಾಷ್ಟ್ರಮಟ್ಟದ ಕರಾಟೆ ಆಟಗಾರ ಸಾತ್ವಿಕ್ ಶರ್ಮ ಕ್ರೀಡಾಕುಂಡದಲ್ಲಿ ಜ್ಯೋತಿಯನ್ನು ಬೆಳಗಿಸಿದರು.
ಈ ಸಂದರ್ಭದಲ್ಲಿ ವಾರ್ಷಿಕೋತ್ಸವ ಪ್ರಯುಕ್ತ ನಡೆಸಲಾದ ಪಂದ್ಯಾಟಗಳನ್ನು ವಿಜೇತರಾದವರಿಗೆ ಬಹುಮಾನವನ್ನು ವಿತರಿಸಲಾಯಿತು. ಕ್ರೀಡಾಪಟು ಕು. ದೀಕ್ಷಾ ನಾಯಕತ್ವದಲ್ಲಿ ಎಲ್ಲಾ ವಿದ್ಯಾರ್ಥಿಗಳು ಪ್ರತಿಜ್ಞಾವಿಧಿ ಸ್ವೀಕರಿಸಿದರು.
ಮುಖ್ಯಗುರುಗಳಾದ ಶ್ರೀಮತಿ ಆಶಾ ಮಾತಾಜಿ ಸ್ವಾಗತಿಸಿ, ಶ್ರೀಮತಿ ಹರಿಣಾಕ್ಷಿ ಮಾತಾಜಿ ವಂದಿಸಿದರು. ಶ್ರೀಮತಿ ಭವ್ಯಾ ಮಾತಾಜಿ ಮತ್ತು ಶ್ರೀಮತಿ ಗೀತಾ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.
ದೈಹಿಕ ಶಿಕ್ಷಕರುಗಳಾದ ಶ್ರೀ ದಾಮೋದರ.ಕೆ, ಶ್ರೀಮತಿ ಹರಿಣಾಕ್ಷಿ, ಕು. ಯಶಸ್ವಿನಿ ಹಾಗೂ ಎಲ್ಲಾ ಶಿಕ್ಷಕ – ಶಿಕ್ಷಕೇತರ ವೃಂದದವರು ಸಹರಿಸಿದರು.