ಗುರುವಂದನೆ

ಗುರುಪೂರ್ಣಿಮೆಯ ಪ್ರಯುಕ್ತ ಕಾಡುಮನೆಯಲ್ಲಿ ಇರುವ ನಿವೃತ್ತ ಶಿಕ್ಷಕರಾದ ಶ್ರೀ ಯಶವಂತ ಬೇಕಲ್ ರವರ ಮನೆಗೆ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳು ಭೇಟಿಯಿತ್ತು ಅವರನ್ನು ಅಭಿನಂದಿಸಿ ಅವರ ಆಶೀರ್ವಾದ ಪಡೆದರು. ಕಾರ್ಯಕ್ರಮದಿಂದ ಸಂತೋಷರಾದ ಯಶವಂತ ಬೇಕಲ್ ರವರು ಗುರುಪೂರ್ಣಿಮೆಯ ಶ್ರೇಷ್ಠತೆಯ ಬಗ್ಗೆ ಮಾತನಾಡುತ್ತಾ ಹಿಂದಿನ ಗುರುಕುಲ ಶಿಕ್ಷಣದ ಶ್ರೇಷ್ಟತೆ ಹಾಗೂ ಈಗಿನ ಮೆಕಾಲೆ ಶಿಕ್ಷಣ ಪದ್ಧತಿಯ ಇತಿಮಿತಿಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸಿದರು. ಅಲ್ಲದೆ ವಿವೇಕಾನಂದ ಶಿಕ್ಷಣ ಸಂಸ್ಥೆಗಳು ಸಂಸ್ಕಾರಯುತ ಶಿಕ್ಷಣವನ್ನು ನೀಡುತ್ತಾ ಸನಾತನ ಸಂಸ್ಕೃತಿಯ ಉಳಿವಿಗೆ ಪ್ರಯತ್ನಿಸುವ ಕುರಿತು ಆನಂದದಿಂದ ಮಾತನಾಡಿದರು.

Guruvandane

Guruvandane (1)

Guruvandane (2)

ಅಲ್ಲದೇ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯು ಸಂಸ್ಕಾರಯುತ ಶಿಕ್ಷಣದೊಂದಿಗೆ ಪಾಠ, ಪಠ್ಯಪೂರಕ ಚಟುವಟಿಕೆಗಳಲ್ಲಿ ರಾಜ್ಯ, ರಾಷ್ಟ್ರದಲ್ಲೇ ಹೆಸರು ಮಾಡಿರುವುದನ್ನು ಸ್ಮರಿಸಿದರು. ಕಾರ್ಯಕ್ರಮವು ತೃಷಾಳ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಅಮಿತಾ ಮತ್ತು ತಂಡ ದೇಶಭಕ್ತಿಗೀತೆ ಹಾಡಿದರು. ವಿದ್ಯಾರ್ಥಿ ವಿಘ್ನೇಶ್, ಗುರುಪೂರ್ಣಿಮೆಯ ಮಹತ್ವವನ್ನು ತಿಳಿಸಿದ ಶ್ರೀಯುತ ಯಶವಂತ ಬೇಕಲ್‌ರ ಬಗ್ಗೆ ಅಭಿನಂದನಾ ಮಾತುಗಳನ್ನಾಡಿದನು. ಶಿಕ್ಷಕ ಚಂದ್ರಶೇಖರ್ ಸ್ವಾಗತಿಸಿ, ವಂದಿಸಿದರು. ಶಿಕ್ಷಕರಾದ ಕು. ಲೀಲಾವತಿ ಹಂದ್ರಟ್ಟ, ಶ್ರೀಮತಿ ವಿದ್ಯಾಅನಿಲ್ ಭಾಗವಹಿಸಿದರು.

Highslide for Wordpress Plugin