ಗುರು ಪೂರ್ಣಿಮೆಯ ಪ್ರಯುಕ್ತ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳು ಕರ್ಕುಂಜ ನಿವಾಸಿ ನಿವೃತ್ತ ಶಿಕ್ಷಕಿ ಶ್ರೀಮತಿ ಕಮಲಾಕ್ಷಿಯವರ ಮನೆಗೆ ತೆರಳಿ ಅವರನ್ನು ಅಭಿನಂದಿಸಿ ಅವರಿಂದ ಆಶೀರ್ವಾದವನ್ನು ಪಡೆದರು. ಶಾಲೆಯ ಮಕ್ಕಳಿಂದ ವಿಶಿಷ್ಟ ರೀತಿಯ ಗುರುಪೂರ್ಣಿಮೆ ಆಚರಣೆಯ ಬಗ್ಗೆ ಖುಷಿ ವ್ಯಕ್ತಪಡಿಸಿದ ಇವರು ನಾವು ಉತ್ತಮ ಗುಣಗಳನ್ನು ಮೈಗೂಡಿಸಿಕೊಳ್ಳೋಣ. ಸಮಾಜಕ್ಕೆ ಬೇಕಾದ ವ್ಯಕ್ತಿಯಾಗಿ ಬಾಳೋಣ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕಮಲಾಕ್ಷಿಟೀಚರ್ರವರು ತಮ್ಮ ಅನುಭವವನ್ನು ಹಂಚಿಕೊಂಡರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕರಾದ ಶ್ರೀಮತಿ ವೀಣಾ ಸರಸ್ವತಿ, ಶ್ರೀಮತಿ ಸೌಮ್ಯಶ್ರೀ, ಶ್ರೀಮತಿ ರೇಶ್ಮಾ ಮತ್ತು ಶ್ರೀ ಗಣೇಶ್ ಎಂ ಪಾಲ್ಗೊಂಡರು.
