ಗುರುಗಳು ತಾಯಿಗೆ ಸಮಾನ. ಅಜ್ಞಾನವೆಂಬ ಅಂಧಕಾರವನ್ನು ಹೋಗಲಾಡಿಸಿ ಬೆಳಕಿನೆಡೆಗೆ ಸಾಗಿಸುವವನೇ ನಿಜವಾದ ಗುರು. ಇಂತಹ ಗುರುಗಳನ್ನು ಸದಾಸ್ಮರಿಸಿ, ಆರಾಧಿಸಬೇಕು ಎಂಬುದಾಗಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ನಡೆದ ’ಗುರುಪೂರ್ಣಿಮೆ’ ಆಚರಣೆಯ ಕುರಿತಾಗಿ ವಿವೇಕಾನಂದ ವಿದ್ಯಾವರ್ಧಕ ಸಂಘದ ಶೈಕ್ಷಣಿಕ ಪರಿವೀಕ್ಷಕರಾದ ಶ್ರೀಯುತ ರಘುರಾಜ್ ಉಬರಡ್ಕ ಅವರು ಹೇಳಿದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದು ಗುರು-ಶಿಷ್ಯ ಪರಂಪರೆಯನ್ನು ಕುರಿತು ಮಾತನಾಡಿದರು. ವೇದಿಕೆಯಲ್ಲಿ ಶಾಲಾ ಹಿರಿಯ ಶಿಕ್ಷಕಿ ಶ್ರೀಮತಿ ದುರ್ಗಾ ಮಾತಾಜಿ ಉಪಸ್ಥಿತರಿದ್ದರು. ಶ್ರೀಮತಿ ನಮಿತಾ ಮಾತಾಜಿ ಕಾರ್ಯಕ್ರಮ ನಿರೂಪಿಸಿ, ವಿದ್ಯಾರ್ಥಿಗಲು ಪ್ರಾರ್ಥಿಸಿದರು. ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ಪ್ರಾರ್ಥಿಸಿದರು. ಕಾರ್ಯಕ್ರಮದ ಬಳಿಕ ವಿದ್ಯಾರ್ಥಿಗಳು ಭಾರತಾಂಬೆಗೆ ಪುಷ್ಪಾರ್ಚನೆಗೈದು ಗುರುವೃಂದದವರ ಆಶೀರ್ವಾದ ಪಡೆದರು. ನಂತರ ಸಿಹಿ ಹಂಚಲಾಯಿತು.


