3 ಮತ್ತು 4 ನೇ ತರಗತಿಯ ಪೋಷಕರ ಸಭೆಯನ್ನು ದಿನಾಂಕ 28-6-2017 ರ ಬುಧವಾರದಂದು ಪೋಷಕರ ಸಭೆಯನ್ನು ನಡೆಸಲಾಯಿತು.
ಪ್ರೌಢಶಾಲಾ ಮುಖ್ಯಗುರುಗಳಾದ ಆಶಾ ಬೆಳ್ಳಾರೆಯವರು ಮಾತನಾಡಿ ಮಾತೃಭಾಷಾ ಶಿಕ್ಷಣದ ಜೊತೆಗೆ ಪೋಷಕರ ಮಾರ್ಗದರ್ಶನದಿಂದ ಮಕ್ಕಳು ಉತ್ತಮ ಪ್ರಗತಿ ಹೊಂದಲು ಸಾಧ್ಯ ಎಂದು ಹೇಳಿದರು. ಅಂತೆಯೇ ಶಾಲಾ ಅಧ್ಯಕ್ಷರಾದ ಶ್ರೀಯುತ ಅಚ್ಯುತನಾಯಕ್ ರವರು ಮಾತನಾಡಿ ನಮ್ಮ ದೇಶದ ಸಂಸ್ಕೃತಿಯ ಜೊತೆಗೆ ಸಂಸ್ಕಾರಯುತವಾದ ಶಿಕ್ಷಣವನ್ನು ಮಕ್ಕಳಿಗೆ ಕೊಡಬೇಕೆಂದು ಹೆಳಿದರು. ಸಭೆಯಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯರಾದ ಶ್ರೀಯುತ ರಮೇಶ್ಚಂದ್ರ ನಾಯಕ್ ಉಪಸ್ಥಿತರಿದ್ದರು. ವೀಣಾಸರಸ್ವತಿ ಮಾತಾಜಿ ಪೋಷಕರಿಗೆ ಅಗತ್ಯ ಸೂಚನೆಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಪ್ರಾಥಮಿಕ ವಿಭಾಗದ ಮುಖ್ಯಗುರು ನಳಿನಿ ವಾಗ್ಲೆ ಉಪಸ್ಥಿತರಿದ್ದರು. ಶ್ರೀಮತಿ ಭವ್ಯಾ ಮಾತಾಜಿ ಕಾರ್ಯಕ್ರಮ ನಿರೂಪಿಸಿದರು.