ವಿವೇಕಾನಂದ ವಿದ್ಯಾವರ್ಧಕ ಸಂಘ ಮತ್ತು ಸಮರ್ಥ ಭಾರತ ಪುತ್ತೂರು ಇವರ ಆಶ್ರಯದಲ್ಲಿ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ನೇತೃತ್ವದಲ್ಲಿ ಒಳಮೊಗ್ರು ಗ್ರಾಮದ ಪರ್ಪುಂಜ ರುದ್ರಭೂಮಿಯ ಆವರಣದಲ್ಲಿ ಕೋಟಿವೃಕ್ಷ ಆಂದೋಲನಕ್ಕೆ ಚಾಲನೆ ನೀಡಲಾಯಿತು. ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಒಳಮೊಗ್ರು ಗ್ರಾಮಕ್ಕೆ ತೆರಳಿ ಆಂದೋಲನದಲ್ಲಿ ಭಾಗವಹಿಸಿದರು.

ಈ ಕಾರ್ಯಕ್ರಮದಲ್ಲಿ ಸಸಿ ನೆಡುವುದರ ಮೂಲಕ ಪ್ರಕೃತಿಯ ಸಮತೋಲನವನ್ನು ಕಾಯ್ದುಕೊಂಡು ಮುಂಂದಿನ ಜನಾಂಗಕ್ಕೆ ಸಂಪದ್ಬರಿತ ಭವ್ಯ ಭಾರತವನ್ನು ನೀಡುವಲ್ಲಿ ಇಂದಿನ ವಿದ್ಯಾರ್ಥಿಗಳ ಪಾಲುದಾರಿಕೆ ಮಹತ್ವದ್ದು ಎಂಬುದಾಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಹೇಳಿದರು. ಶ್ರೀ ಹರೀಶ್ ಬಿಜತ್ರೆ, ಪುತ್ತೂರು ತಾಲೂಕು ಪಂಚಾಯತ್ ಸದಸ್ಯರು ಇವರು ಮಾತನಾಡಿ ಪಂಡಿತ ದೀನದಯಾಳ್ ಉಪಾಧ್ಯಾಯರ ಸಂಘಟನಾ ಚಾತುರ್ಯ ದೇಶ ಸೇವೆಯ ಬಗ್ಗೆ ವಿವರವಾಗಿ ಈ ಸಂದರ್ಭದಲ್ಲಿ ತಿಳಿಸಿದರು.


ಈ ಕಾರ್ಯಕ್ರಮದಲ್ಲಿ ಒಳಮೊಗ್ರು ಪಂಚಾಯತ್ ಅಧ್ಯಕ್ಷ ಯತಿರಾಜ್ ರೈ, ಸದಸ್ಯರಾದ ಉಷಾ ನಾರಾಯಣ್, ಮಹೇಶ್ ಕೇರಿ, ಚಂದ್ರಕಲಾ, ವಸಂತಿ ಆರ್ ಶೆಟ್ಟಿ, ವಸಂತಿ ಡಿ, ಭಾಗೀರಥಿ ಮತ್ತು ರಾಜೇಶ್ ಉಜಿ ಪರ್ಪುಂಜ, ಬಿ.ಜೆ.ಪಿಗ್ರಾಮ ಸಮಿತಿ ಅಧ್ಯಕ್ಷ ನಿಖೇಶ್ ಕುಮಾರ್ ಶಾಂತಿವನ, ಮಂಡಲ ಉಪಾಧ್ಯಕ್ಷ ರಾಮಯ್ಯ ಗೌಡ ರೈತ ಮೋರ್ಛಾ ಪುತ್ತೂರು ಮಂಡಲದ ಸದಸ್ಯರಾದ ಗೀತೇಶ್ ಉಜಿ ಮಡಪ್ಪಾಡಿ, ಅಜಿತ್ ರೈ ಹೊಸಮನೆ, ಮಹಿಳಾ ಮೋರ್ಚಾ ಕಾರ್ಯದರ್ಶಿ ಸುಷ್ಮಾ ಕುಂಬ್ರ ಮತ್ತು ಸ್ನೇಹ ಯುವಕ ಮಂಡಲದ ಸದಸ್ಯರು ಹಾಗೂ ವಿವೇಕಾನಂದ ಶಾಲಾ ಶಿಕ್ಷಕರಾದ ಲೀಲಾವತಿ, ದಾಮೋದರ್. ಹರೀಶ್ ಕೆ ಉಪಸ್ಥಿತರಿದ್ದರು, ಮಹೇಶ್ ಕೇರಿ ಸ್ವಾಗತಿಸಿ, ಹರೀಶ್ ಬಿಜತ್ರೆ ವಂದಿಸಿ, ಸಂತೋಷ್ ಕುಮಾರ್ ರೈ ಕೈಕಾರ ಕಾರ್ಯಕ್ರಮ ನಿರೂಪಿಸಿದರು.